ಉತ್ತರಪ್ರದೇಶ : 144 ವರ್ಷಗಳ ಬಳಿಕ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಐತಿಹಾಸಿಕ ಮಹಾ ಕುಂಭಮೇಳ ನಡೆಯುತ್ತಿದ್ದು, ಈ ಒಂದು ಕುಂಭಮೇಳದಲ್ಲಿ ಕರ್ನಾಟಕದ ಬ್ರಾಂಡ್ ನಂದಿನಿ ಹಾಲು ಇದೀಗ ಉತ್ತರಪ್ರದೇಶದಲ್ಲೂ ಧೂಳೆಬ್ಬಿಸಿದೆ. ಹೌದು ಮಹಾಕುಂಭಮೇಳದಲ್ಲಿ 10 ಟೀ ಪಾಯಿಂಟ್ ತೆರೆಯಲು ಕೆಎಂಎಫ್ ಒಪ್ಪಂದ ಮಾಡಿಕೊಂಡಿದೆ.
ಮಹಾಕುಂಭಮೇಳದಲ್ಲಿ ಕೆಎಂಎಫ್ ಸಹಭಾಗಿತ್ವದಲ್ಲಿ 10 ಟೀ ಪಾಯಿಂಟ್ ತೆರೆಯಲು ಸಿದ್ಧತೆ ನಡೆಸಲಾಗಿದ್ದು, ಜೊತೆಗೆ ನಂದಿನಿ ಹಾಲಿನ ಬಳಕೆ ಹಾಗೂ ನಂದಿನಿ ಉತ್ಪನ್ನಗಳ ಮಾರಾಟ ನಡೆಯಲಿದೆ. ಈ ಟೀ ಪಾಯಿಂಟ್‌ನಿಂದ ಸುಮಾರು ಒಂದು ಕೋಟಿ ಟೀ ಮಾರಾಟ ಮಾಡುವ ಗುರಿಯನ್ನು ಕೆಎಂಎಫ್ ಹಾಕಿಕೊಂಡಿದೆ. ಈ ಮೂಲಕ ಒಂದು ಮೇಳದಲ್ಲಿ ಅತೀ ಹೆಚ್ಚು ಟೀ ಮಾರಾಟ ಮಾಡಿದ ಸಂಸ್ಥೆಯೆಂದು ಗಿನ್ನಿಸ್ ದಾಖಲೆ ನಿರ್ಮಿಸುವ ಪ್ರಯತ್ನ ಮಾಡಲಿದೆ.
ಇನ್ನೂ ಮಾಹಕುಂಭಮೇಳದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನಾಗ ಸಾಧುಗಳು ಶಾಹಿ ಸ್ನಾನದಲ್ಲಿ ಭಾಗಿಯಾಗಿದ್ದು, ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ನಡೆಯುತ್ತಿದೆ. ಫೆ.26ರ ಮಹಾ ಶಿವರಾತ್ರಿವರೆಗೂ ಮಹಾಕುಂಭಮೇಳ ನಡೆಯಲಿದೆ.ಪ್ರಯಾಗ್‌ರಾಜ್‌ನಲ್ಲಿ ಜ.13ರಿಂದ ಪ್ರಾರಂಭವಾಗಿರುವ ಮಾಹಕುಂಭಮೇಳ 44 ದಿನಗಳ ಕಾಲ ನಡೆಯಲಿದ್ದು, ಈ ಮೇಳದಲ್ಲಿ ನಂದಿನಿ ಹಾಲಿನ ಮೂಲಕ ಖ್ಯಾತಿ ಪಡೆದಿರುವ ಕೆಎಂಎಫ್ ತನ್ನ ಕೈ ಚಳಕ ತೋರಿಸಲಿದೆ.