ನವದೆಹಲಿ : ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳು ನಿರಂತರವಾಗಿ ಕ್ಷೀಣಿಸುತ್ತಿರುವಂತೆ ತೋರುತ್ತಿದೆ. ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನ ಪದಚ್ಯುತಗೊಳಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಉದ್ವಿಗ್ನಗೊಂಡಿವೆ. ಬಾಂಗ್ಲಾ ನುಸುಳುಕೋರರನ್ನು ತಡೆಯಲು ಭಾರತೀಯ ಗಡಿ ಭದ್ರತಾ ಪಡೆ (BSF) ಭದ್ರತೆಯನ್ನ ಬಿಗಿಗೊಳಿಸಿದೆ. ಗಡಿ ಪ್ರದೇಶದಲ್ಲಿ ಬಿಎಸ್ಎಫ್ ತೀವ್ರ ನಿಗಾ ಇರಿಸಿದ್ದು, ಇದರಿಂದ ಬಾಂಗ್ಲಾದೇಶದ ಮೊಹಮ್ಮದ್ ಯೂನಸ್ ಸರ್ಕಾರ ಆತಂಕಕ್ಕೆ ಒಳಗಾಗಿದೆ.
ಭಾರತವು ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನರ್ ಅವರನ್ನ ಕರೆಸಿದೆ.!
ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಭಾನುವಾರ ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮಾ ಅವರನ್ನ ಕರೆಸಿ ಗಡಿಯಲ್ಲಿ ಭಾರತದ ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸೋಮವಾರ, ಭಾರತದ ವಿದೇಶಾಂಗ ಸಚಿವಾಲಯವು ಹೊಸದಿಲ್ಲಿಯಲ್ಲಿರುವ ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನರ್ ನೂರುಲ್ ಇಸ್ಲಾಂ ಅವರನ್ನ ಕರೆಸಿದೆ. ಭಾರತ-ಬಾಂಗ್ಲಾದೇಶ ಗಡಿಗೆ ಬೇಲಿ ಹಾಕುವ ವಿಚಾರದಲ್ಲಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದಿಂದ ಸಹಕಾರದ ಕೊರತೆಯ ಕುರಿತು ಭಾರತವು ನವದೆಹಲಿಯಲ್ಲಿ ಬಾಂಗ್ಲಾದೇಶದ ಉನ್ನತ ರಾಜತಾಂತ್ರಿಕರನ್ನ ಕರೆಸಿದೆ.
ಬಾಂಗ್ಲಾದೇಶ ಗಡಿಯಲ್ಲಿ ಭಾರತ ಬೇಲಿ ಹಾಕುತ್ತಿದೆ.!
ಬಾಂಗ್ಲಾದೇಶಿ ನುಸುಳುಕೋರರು ಗಡಿ ಪ್ರವೇಶಿಸುವುದನ್ನ ತಡೆಯಲು ಭಾರತ ಗಡಿಯಲ್ಲಿ ಬೇಲಿ ಹಾಕಲು ಆರಂಭಿಸಿದೆ. ಇದರಿಂದ ಬಾಂಗ್ಲಾದೇಶ ಆಘಾತಕ್ಕೊಳಗಾಗಿದೆ. ಢಾಕಾದಲ್ಲಿ ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಜಾಶಿಮ್ ಉದ್ದೀನ್ ಅವರೊಂದಿಗೆ ಭಾರತೀಯ ಹೈಕಮಿಷನರ್ ಸಭೆಯು ಈ ವಿಷಯಗಳ ಕುರಿತು ಸುಮಾರು 45 ನಿಮಿಷಗಳ ಕಾಲ ನಡೆಯಿತು. ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಚರ್ಚೆಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
#WATCH | Delhi: Nural Islam, Deputy High Commissioner of Bangladesh to India leaves from South Block after he was summoned by the Ministry of External Affairs
More details awaited. pic.twitter.com/WlF3UIArrR
— ANI (@ANI) January 13, 2025
VIDEO : ಕುಂಭವೇಳದಲ್ಲಿ ಸುಂದರ ‘ಸಾಧ್ವಿ’ ಪ್ರತ್ಯಕ್ಷ, ಪತ್ರಕರ್ತೆ ಜೊತೆಗಿನ ಪ್ರಶ್ನೋತ್ತರ ವೀಡಿಯೊ ವೈರಲ್
ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ‘ಮಾರ್ಕ್ ಜುಕರ್ಬರ್ಗ್’ ಹೇಳಿಕೆಗೆ ಸಚಿವ ‘ಅಶ್ವಿನಿ ವೈಷ್ಣವ್’ ತಿರುಗೇಟು
ನೀವು ಬೆರಳಿಗೆ ಧರಿಸುವ ‘ರತ್ನಾಭರಣ’ಗಳ ಉಪಯೋಗ ಏನುಗೊತ್ತಾ? ಇಲ್ಲಿದೆ ಮಾಹಿತಿ