ಬಾಗಲಕೋಟೆ : ಸೈಬರ್ ವಂಚಕರು ಜನಸಾಮಾನ್ಯರನ್ನು ಗುರಿಯಾಗಿಸಿ ಕೊಂಡು ಡಿಜಿಟಲ್ ಮತ್ತು ಒನ್ಲೈನ್ ವಂಚನೆಯ ಮೂಲಕ ಅವರ ಖಾತೆಯಲ್ಲಿದ್ದಂತಹ ಲಕ್ಷಾಂತರ ಹಣವನ್ನು ದೋಚಿರುವ ಪ್ರಕರಣಗಳನ್ನು ನಾವು ಕೇಳಿದ್ದೇವೆ. ಆದರೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಕೂಡ ಇದೀಗ ವಂಚನೆ ಎಸಗಿರುವುದು ಬೆಳಗೆ ಬಂದಿದೆ.
ಹೌದು ಬಾಗಲಕೋಟೆಯಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದ್ದು, ಮೊಬೈಲ್ನಲ್ಲಿ ಒಂದು ಲಿಂಕ್ ಬರುತ್ತದೆ. ಈ ಒಂದು ಲಿಂಕ್ ಓಪನ್ ಮಾಡಿದ್ ತಕ್ಷಣ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರ ಕಾಣಿಸಿಕೊಳ್ಳುತ್ತದೆ. ಲಿಂಕ್ ಓಪನ್ ಮಾಡಿದ ತಕ್ಷಣ ನಿಮ್ಮ ಖಾತೆಯಲ್ಲಿನ ಹಣ ಫೋನ್ ಪೇ ಮೂಲಕ 749 ವಂಚಕರ ಖಾತೆಗೆ ವರ್ಗಾವಣೆಯಾಗುತ್ತದೆ. ಮೊಬೈಲ್ ರಿಚಾರ್ಜ್ ಹೆಸರಿನಲ್ಲಿ ವಂಚಕರು ಈ ಒಂದು ಲಿಂಕ್ ಕ್ರಿಯೇಟ್ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನ ಮೊಬೈಲ್ ಇಂದ ಮೊಬೈಲ್ ಗೆ ಫೇಕ್ ಲಿಂಕ್ ಪಾಸ್ ಆಗುತ್ತಿದ್ದು, ಮತ್ತೊಂದೆಡೆ ಫೇಕ್ ಲಿಂಕ್ ಓಪನ್ ಮಾಡಿದ್ರೆ ಸಿಎಂ ಸಿದ್ದರಾಮಯ್ಯ ಪೋಟೋ ಓಪನ್ ಆಗುತ್ತೆ. ಆನ್ಲೈನ್ ವಂಚಕರು 749 ರೂ.ಗಳ ಉಚಿತ ರೀಚಾರ್ಜ್ ಎಂದು ಸಿಎಂ ಪೋಟೋ ಬಳಸಿ ಫೇಕ್ ಲಿಂಕ್ ಕ್ರಿಯೆಟ್ ಮಾಡಿದ್ದು, ವ್ಯಾಟ್ಸಪ್ ಗ್ರೂಪ್ಗಳಿಗೆ ಹರಿಬಿಟ್ಟಿದ್ದಾರೆ.