ಬೆಂಗಳೂರು : ಹಣ ಡಬ್ಬಲಿಂಗ್ ಮಾಡುವುದಾಗಿ ನಂಬಿಸಿ ಸುಮಾರು ಎರಡು ಕೋಟಿ ಹಣ ವಂಚಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದ್ದು, ಸದ್ಯ ಆರೋಪಿಗಳನ್ನು ಇದೀಗ ಬೆಂಗಳೂರಿನ ಹಲಸೂರು ಗೇಟ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು ಇದೀಗ 7 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಶ್ಯಾಮ್ ಥಾಮಸ್, ಜೋಶ್ ಕರುವಿಲ್ಲ, ಜಾಫರ್ ಸಾಧಿಕ್ ಅಲಿಯಾಸ್ ದೀಪಕ್, ಜೀನ್ ಕಮಲ್, ವಿಜಯ್ ಚಿಕ್ಲೋಂಕರ್ ಅಲಿಯಾಸ್ ರವಿ, ಅಮಿತ್ ಅಲಿಯಾಸ್ ದೀಪಕ್, ಊರ್ವಶಿ ಗೋಸ್ವಾಮಿ ಅಲಿಯಾಸ್ ಸೋನು ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದ್ದು ಬಂಧಿತರಿಂದ ಸುಮಾರು 44 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ.
PWD ಕಾಂಟ್ರಾಕ್ಟರ್ ನವೀನ್ ಎಂಬತರಿಗೆ 2 ಕೋಟಿ ಹಣ ವಂಚಿಸಿದ್ದಾರೆ. ಪ್ರಾರಂಭಿಕವಾಗಿ ಒಂದು ಲಕ್ಷ ಹಣ ಆರ್ಟಿಜಿಎಸ್ ಮಾಡಿದ್ದರು. ನಗರದಲ್ಲಿ ಲಾಕರ್ ಇಲ್ಲ ಅಂತ ಆರೋಪಿಗಳು ಹೇಳಿದ್ದರು. ನಗದು ಕೊಟ್ಟರೆ ಡಬಲ್ ಮಾಡಿ ಕೊಡುವುದಾಗಿ ಆಮೀಷ ಒಡ್ಡಿದ್ದಾರೆ. ಆರ್ ಟಿ ಜಿ ಎಸ್ ಮೂಲಕ ಹಣ ವಾಪಸ್ ಮಾಡುವುದಾಗಿ ಆರೋಪಿಗಳು ನಂಬಿಸಿದ್ದಾರೆ.
MEDC ಅನ್ನೋ ಕಂಪನಿ ಹೆಸರಿನಲ್ಲಿ ವಂಚನೆ ಮಾಡಲಾಗಿದೆ. ಮಲೇಶಿಯಾ ಡೆವಲಪ್ಮೆಂಟ್ ಬೋರ್ಡ್ ಕಂಪನಿ (MEDC) ಎಂಬ ಹೆಸರಿನಲ್ಲಿ ಆರೋಪಿಗಳು ವಂಚನೆ ಎಸಗಿದ್ದಾರೆ. ನಕಲಿ ಕಂಪನಿಯಲ್ಲಿ ಹಣ ಹೊಡುವಂತೆ ಆಮೀಷ ಒಡಲಾಗಿದ್ದು ಹಣ ಹೂಡಿದರೆ ಹಣ ಡಬಲ್ ಮಾಡಿಕೊಡುತ್ತೇವೆ ಎಂದು ವಂಚಿಸಿದ್ದಾರೆ.
ಇನ್ನು ಮಲೇಷ್ಯಾದಿಂದ ವಂಚನೆ ನಡೆಸಿರುವ ವಿಕ್ಕಿ ಅಹುಜಾ ಪಿಡಬ್ಲ್ಯೂಡಿ ಕಂಟ್ರಾಕ್ಟರ್ ನವೀನ್ ಜೆ ಎಂಬಾತನಿಗೆ ವಂಚನೆ ಎಸಗಲಾಗಿದೆ. ಮಧ್ಯವರ್ತಿಗಳ ಮೂಲಕ ವಿಕ್ಕಿ ಅಹುಜಾ ಈ ಒಂದು ಡೀಲ್ ಮಾಡುತ್ತಿದ್ದ ಎನ್ನಲಾಗಿದೆ. ಮೋಸ ಹೋದ ವಿಚಾರ ತಿಳಿದು ಹಲಸೂರು ಗೇಟ್ ಠಾಣೆ ಪೊಲೀಸರಿಗೆ ನವೀನ್ ದೂರು ನೀಡಿದ್ದಾರೆ. ಆರೋಪಿಗಳನ್ನು ಸದ್ಯ ಹಲಸೂರು ಗೇಟ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.