ದಾವಣಗೆರೆ : ಒಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಅವರು ನನಗೆ ಯಾರ ಬೆಂಬಲವೂ ಬೇಡ ಯಾವ ಘೋಷಣೆಗಳು ಬೇಡ, ನನಗೆ ಪಕ್ಷ ಮುಖ್ಯ ಎಂದು ಹೇಳುತ್ತಿದ್ದರೆ, ಇನ್ನೊಂದು ಕಡೆ ಅವರ ಬೆಂಬಲಿಗರು ಹಾಗೂ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಹೇಳಿಕೆ ನೀಡುತ್ತಿದ್ದಾರೆ ಇದೀಗ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಾಗಂಗಾ ಕೂಡ ಡಿಕೆ ಶಿವಕುಮಾರ್ ಅವರ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ.
ಈ ಕುರಿತು ದಾವಣಗೆರೆಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಸಿಎಂ ಆಗೇ ಆಗುತ್ತಾರೆ. ಈ ಹಿಂದೆಯೂ ಹೇಳಿದ್ದೆ ಈಗಲೂ ಹೇಳುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರು ಐದು ವರ್ಷ ಸಿಎಂ ಆಗಬೇಕಿತ್ತು ಆದರೆ ಕೆಲ ಬೆಳವಣಿಗೆಯಿಂದ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ ಕುರ್ಚಿ ಖಾಲಿಯಾದ ತಕ್ಷಣ ಕ್ಲೈಮ್ ಮಾಡುತ್ತೇನೆ ಎಂದರು
ಡಿಕೆ ಶಿವಕುಮಾರ್ ಪಕ್ಷ ಸಂಘಟನೆ ಮಾಡಿ ಎಲ್ಲರನ್ನೂ ಒಗ್ಗೂಡಿಸಿದ್ದಾರೆ. ಉಳಿದವರಿಗೆ ಯಾರನ್ನು ಕರೆಯುತ್ತಿರಲು ಸಾಧ್ಯವಾಗುವುದಿಲ್ಲ.ಈ ರೀತಿ ಆಪರೇಷನ್ ಮಾಡಿ ಕರೆ ತರಲಿ ನೋಡೋಣ ಕೆಲವರಿಗೆ ಅಧಿಕಾರ ಬೇಕು ಮಾಡಿಟ್ಟ ಊಟಕ್ಕೆ ಬರುತ್ತಾರೆ ಎಂದು ಶಾಸಕ ಬಸವರಾಜ್ ಶಿವಾಗಂಗಾ ಅವರು ತಿಳಿಸಿದರು. ಶಾಸಕರು ಕಾರ್ಯಕರ್ತರ ಬೆಂಬಲ ಬೇಡ ಎಂದು ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಒಳ್ಳೆಯ ಅರ್ಥದಲ್ಲಿ ಹೇಳಿದ್ದಾರೆ. ಕೆಟ್ಟದಾಗಿ ನೋಡಿದರೆ ತಪ್ಪಾಗಿ ಅರ್ಥೈಸಿದರೆ ತಪ್ಪಾಗಿ ಕೇಳಿಸುತ್ತದೆ.
ಹೋರಾಟ ಮಾಡಿ ಕಷ್ಟಪಟ್ಟು ಪಕ್ಷದ ಎಲ್ಲಾ ಶಾಸಕರನ್ನು ಗೆಲ್ಲಿಸಿದ್ದೇನೆ. ಡಿಸೆಂಬ ಡಿಕೆ ಶಿವಕುಮಾರ್ ಶಾಸಕರನ್ನು ಆರ್ಡರ್ ಮಾಡಿ ಕೇಳಬೇಕು. ನಾವೆಲ್ಲ ಒಗ್ಗಟ್ಟಾಗಿ ಇದ್ದೇವೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ಏನಾದರೂ ತೀರ್ಮಾನ ತೆಗೆದುಕೊಳ್ಳಬೇಕಾದರೆ ಹೈಕಮಾಂಡ್ ಇದೆ. ಅಧಿಕಾರ ಹಂಚಿಕೆ ಯಾವುದು ಇಲ್ಲ ಹೈಕಮಾಂಡ್ ನಿರ್ಧಾರವೇ ಅಂತಿಮ. ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿರುವುದು ಸರಿ ಇದೆ ಅವರ ಪರವಾಗಿ ನಾವಿದ್ದೇವೆ ಸಚಿವ ಕೆ ಎನ್ ರಾಜಣ್ಣ ಹೇಳಿರುವುದು ಸರಿ ಇದೆ ಎಂದರು.