ಬೆಂಗಳೂರು : ಬೆಂಗಳೂರಿನಲ್ಲಿ ಕಿಡಿಗೇಡಿಗಳಿಂದ ಪೈಶಾಚಿಕ ಕೃತ್ಯ ನಡೆದಿದ್ದು, ರಸ್ತೆಯ ಮೇಲೆ ಮಲಗಿದಂತಹ ಮೂರು ಹಸುಗಳ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಇದೀಗ ಈ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ ಅವರು ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸುತ್ತೇನೆ ಎಂದು ತಿಳಿಸಿದರು.
ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದಿರುವ ಘಟನೆ ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದಲ್ಲಿ ನಡೆದಿದೆ. ಕಿಡಿಗೇಡಿಗಳು ರಸ್ತೆಯಲ್ಲಿ ಮಲಗಿದ್ದಂತಹ ಹಸುಗಳ ಕೆಚ್ಚಲು ಕೊಯ್ದಿದ್ದಾರೆ. ಈ ಕುರಿತು ಚಾಮರಾಜಪೇಟೆ ಠಾಣೆಯ ಪೊಲೀಸರ ಜೊತೆಗೆ ನಾನು ಮಾತನಾಡುತ್ತೇನೆ.ಕಿಡಿಗೇಡಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ವಾದಂತಹ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಗ್ರಹ ಇಲಾಖೆಯ ಸಚಿವ ಡಾ.ಜಿ ಪರಮೇಶ್ವರ್ ಅವರು ತಿಳಿಸಿದರು.
ಘಟನೆ ಹಿನ್ನೆಲೇ?
ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ರಸ್ತೆಯಲ್ಲಿ ಮಲಗಿದ್ದಂತಹ ಮೂರು ಹಸುಗಳ ಕೆಚ್ಚಲುಗಳನ್ನು ಕಿಡಿಗೇಡಿಗಳು ಕೊಯ್ದಿರುವ ಹೀನ ಕೃತ್ಯ ಬೆಂಗಳೂರು ಜಿಲ್ಲೆಯ ಚಾಮರಾಜಪೇಟೆಯಲ್ಲಿ ನಡೆದಿದೆ. ಹೌದು ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಒಂದು ಘಟನೆ ನಡೆದಿದೆ. ರಸ್ತೆಯಲ್ಲಿ ಮಲಗಿದ್ದಂತಹ ಮೂರು ಹಸುಗಳನ್ನು ಕೆಚ್ಚಲನ್ನು ಕಿಡಿಗೇಡಿಗಳು ಕೊಯ್ದಿದ್ದಾರೆ.
ಸದ್ಯಕ್ಕೆ ಚಾಮರಾಜಪೇಟೆಯ ಬಸವ ಆಸ್ಪತ್ರೆಯಲ್ಲಿ ಮೂರು ಹಸುಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ರಾತ್ರಿ ಮೂರು ಹಸುಗಳ ಕೆಚ್ಚಲನ್ನು ಕಿಡಿಗೇಡಿಗಳು ಕೊಯ್ದಿದ್ದಾರೆ. ಮನುಷ್ಯರಿಗೆ ಒಂದು ಸಾರಿ ಸೂಜಿ ಚುಚ್ಚಿದರೆ ಸಾಕು ನೋವು ಎಂದು ಕಿರುಚಲು ಬಾಯಿ ಆದರೂ ಇದೆ. ಆದರೆ ಪಾಪ ಮಾತು ಬರದೇ ಇರುವಂತಹ ಮೂಕ ಪ್ರಾಣಿಗಳ ಕೆಚ್ಚಲು ಕೊಯ್ಯುವಾಗ ಎಷ್ಟು ವೇದನೆ ಅನುಭವಿಸರಲಿಕ್ಕಿಲ್ಲ? ಸದ್ಯ ಹಸುಗಳಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂಥ ವಿಕೃತಿ ಮೆರೆದ ಪಾಪಿಗಳನ್ನು ಒದ್ದು ಒಳಗೆ ಹಾಕಿ ಎಂದು ಸ್ಥಳೀಯ ನಿವಾಸಿಗಳು ಕಿಡಿ ಕಾರಿದ್ದಾರೆ.