ಬೆಂಗಳೂರು : ನಾಳೆ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ CLP ಸಭೆ ಹಾಗೂ ಜನವರಿ 21ರಂದು ಬೆಳಗಾವಿಯಲ್ಲಿ ಗಾಂಧಿ ಸಮಾವೇಶದ ಕುರಿತು, ಸೇರಿದಂತೆ ಇನ್ನೂ ಅನೇಕ ವಿಷಯಗಳ ಕುರಿತಂತೆ ಚರ್ಚಿಸಲು ಇಂದು ಬೆಂಗಳೂರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇದೆ ವೇಳೆ ಎಸ್ ಸಿ, ಎಸ್ ಟಿ ಸಚಿವರಿಂದ ಸಭೆಯ ಕುರಿತು ಅಜೆಂಡ ಮನವರಿಕೆ ಮಾಡುವ ಸಾಧ್ಯತೆ ಇದ್ದು, ಸುರ್ಜೆವಾಲಾಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗುತ್ತದೆ. ಇಂದು ರಾತ್ರಿ ರಣಧೀಪ್ ಸಿಂಗ್ ಸುರ್ಜೆವಾಲಾ ಬೆಂಗಳೂರಿಗೆ ಆಗಮಿಸಲಿದ್ದು, ಪಕ್ಷದ ಒಗ್ಗಟ್ಟು ಕಾಪಾಡಲು ಕೆಲವು ಮಹತ್ವದ ಸೂಚನೆ ನೀಡಲಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಎಲ್ಲ ನಾಯಕರಿಗೆ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವ ಬಗ್ಗೆ ಸೂಚನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.ಅಲ್ಲದೇ ನಾಳೆ ಖಾಸಗಿ ಹೋಟೆಲ್ ಸಿ ಎಲ್ ಪಿ ಸಭೆ ನಡೆಯಲಿದ್ದು, ಜನವರಿ 21ರ ಬೆಳಗಾವಿಯಲ್ಲಿ ಗಾಂಧಿ ಸಮಾವೇಶ ಹಾಗೂ ಸಮಾವೇಶದ ಪೂರ್ವ ಸಿದ್ಧತೆ ಕುರಿತು ಚರ್ಚಿಸಲಿದ್ದಾರೆ. ಈ ವೇಳೆ ಡಿನ್ನರ್ ಗೆ ಬ್ರೇಕ್ ಹಾಕಿದ ವಿಷಯದ ಕುರಿತು ಚರ್ಚೆ ನಡೆಸಲಾಗುತ್ತದೆ. ಕಾಂಗ್ರೆಸ್ ನಲ್ಲಿ ರಾಜಕೀಯ ಚಟುವಟಿಕೆಗಳು ಇದೀಗ ಬಿರುಸುಗೊಂಡಿವೆ.