ಕಲಬುರ್ಗಿ : ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆಟೋಮೊಬೈಲ್ ಅಂಗಡಿ ಒಂದಕ್ಕೆ ಬೆಂಕಿ ತಗುಲಿ ಬೆಂಕಿಯ ಕೆನ್ನಾಲಿಗೆ ಸಂಪೂರ್ಣವಾಗಿ ಅಂಗಡಿಯನ್ನು ಆವರಿಸಿದ ಪರಿಣಾಮ ಆಟೋಮೊಬೈಲ್ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಶಹಾಬಾದ್ ನಗರದ ಕನಕದಾಸ ವೃತ್ತದ ಬಳಿ ನಡೆದಿದೆ.
ಹೌದು ಕಳೆದ ಶುಕ್ರವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೇವರ್ಗಿ ರಸ್ತೆಯಲ್ಲಿನ ಚಿನ್ನಾಜಿ ಕಾಂಪ್ಲೆಕ್ಸ್ ನಲ್ಲಿ ಇರುವ ಬಾಲಾಜಿ ಆಟೋಮೊಬೈಲ್ಸ್ ಅಂಗಡಿಯು ವಿದ್ಯುತ್ ಸ್ಪರ್ಶದಿಂದ ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿರುವ ಘಟನೆ ಶುಕ್ರವಾರ ರಾತ್ರಿ 10 ಗಂಟೆಯ ಸುಮಾರಿಗೆ ಬೆಂಕಿ ಹತ್ತಿದ್ದು, ಸ್ಥಳದಲ್ಲಿ ಇದ್ದ ಸಾರ್ವಜನಿಕರು ಬೆಂಕಿ ನಂದಿಸಲು ಪ್ರಯತ್ನಿಸಿದ್ದರೂ ಯಶಸ್ವಿಯಾಗಲಿಲ್ಲ, ಹಾಗಾಗಿ ಬೆಂಕಿಯ ಕೆನ್ನಾಲಗೆಯಿಂದ ಅಂಗಡಿ ಸುಟ್ಟು ಕರಕಲಾಗಿತ್ತು.
ಅಂಗಡಿಯಲ್ಲಿ ವಾಹನಕ್ಕೆ ಬಳಸುವ ಬೆಲೆಬಾಳುವ ಆಯಿಲ್ ಗಳು, ಯಂತ್ರೋಪಕರಣಗಳ ಬಿಡಿ ಭಾಗಗಳು, ಪ್ಲಾಸ್ಟಿಕ್ ಸಾಮಗ್ರಿಗಳು, ಇಂಜಿನ್ ಸಾಮಾನುಗಳು ಸಂಪೂರ್ಣವಾಗಿ ಬಸ್ಮವಾಗಿವೆ. ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸುವ ಮೊದಲೇ ಸಂಪೂರ್ಣ ಸುಟ್ಟು ಹೋಗಿತ್ತು, ಸುಮಾರು 15 ಲಕ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಬಾಲಾಜಿ ಆಟೋಮೊಬೈಲ್ಸ್ ಅಂಗಡಿಯ ಮಾಲೀಕ ಮಹಾಂತಪ್ಪ ತಿಳಿಸಿದ್ದಾರೆ.