ಕಲಬುರ್ಗಿ : ಕಲ್ಬುರ್ಗಿಯ ಶೇಖ್ ದರ್ಗಾದಲ್ಲಿ ನಿನ್ನೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕಲ್ಬುರ್ಗಿಯ ಚೌಕ ಪೊಲೀಸ್ ಠಾಣೆಯಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ 6 ಜನರ ವಿರುದ್ಧ ಇದೀಗ FIR ದಾಖಲಾಗಿದೆ.
ನಿನ್ನೆ ರಾಷ್ಟ್ರಧ್ವಜದ ಮೇಲೆ ಹಸಿರು ಬಣ್ಣದ ಮುಸ್ಲಿಂ ಧ್ವಜಾರೋಹಣ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಮೊಹಮ್ಮದ್ ಅಫ್ಜಲ್ ಉದ್ದೀನ್, ಜುನೈದಿ ಮೊಹಮ್ಮದ್, ಕಿವ ಮೋದ್ದೀನ್ ಜುನೈದಿ, ತಾಹಿರ್ ಅಲ್ಲಾಹುದ್ದೀನ್ ಜುನೈದಿ, ಫಕ್ರುದ್ದೀನ್ ಮಣಿಯಾಲ್, ಹಾಗೂ ರಿಜ್ವಾನ್ ಮೌಲಾನ್ ಅಹಮದ್ ವಿರುದ್ಧ ಕಲಬುರ್ಗಿಯ ಚೌಕ ಠಾಣೆಯಲ್ಲಿ FIR ದಾಖಲಾಗಿದೆ.
ನಿನ್ನೆ ರಿಜ್ವಾನ್ ಹುಟ್ಟುಹಬ್ಬದ ವೇಳೆ ರಾಷ್ಟ್ರಧ್ವಜದ ಕೆಳಗೆ ಹಸಿರು ಬಣ್ಣದ ಧ್ವಜ ಹಾರಾಟ ಮಾಡಿ ಅವಮಾನ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ರಾಷ್ಟ್ರಧ್ವಜ ಇಟ್ಟು ಅಪಮಾನ ಮಾಡಿದ ಆರೋಪ ಕೇಳಿ ಬಂದಿದೆ. ಕಲ್ಬುರ್ಗಿ ಶೇಖ್ ರೋಜಾ ದರ್ಗಾದ ಆವರಣದಲ್ಲಿ ಈ ಒಂದು ಘಟನೆ ನಡೆದಿತ್ತು.
ಶಿವಮೊಗ್ಗ ಹೊರವಲಯದ ಅನುಪಿನಕಟ್ಟೆಯಲ್ಲಿ ಈ ಒಂದು ಕೊಲೆ ನಡೆದಿದೆ. ವೈಯಕ್ತಿಕ ದ್ವೇಷಕ್ಕೆ ಅಣ್ಣ ಲೋಕೇಶ್ ತಮ್ಮ ಗಿರೀಶ್ ನಾಯಕನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಲೊಕೇಶನ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.