ಬೆಂಗಳೂರು: ನಗರದಲ್ಲಿ ಮತ್ತೊಂದು ರೋಡ್ ರೇಜ್ ಕೇಸ್ ನಡೆದಿದೆ. ವಾರದ ಹಿಂದೆ ನಡೆದಿರುವಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾರು ಟಚ್ ಆಗಿದ್ದಕ್ಕೆ ಕಿರಿಕ್ ತೆಗೆದು ಕಾರಿನ ಗ್ಲಾಸನ್ನೇ ಬೈಕ್ ಸವಾರನೊಬ್ಬ ಹೊಡೆದು ಹಾಕಿದ್ದಾನೆ.
ಬೆಂಗಳೂರಿನ ಹಲಸೂರು ಬಳಿಯಲ್ಲಿ ಕಾರು ಟಚ್ ಆಗಿದ್ದಕ್ಕೆ ರೋಡ್ ರೇಜ್ ಮಾಡಿರುವಂತ ಪ್ರಕರಣವೊಂದು ನಡೆದಿದೆ. ಕಾರು ಟಚ್ ಆಗಿದ್ದಕ್ಕೆ ಕಿರಿಕ್ ತೆಗೆದಂತ ಯುವಕನೊಬ್ಬ, ಕಾರಿನ ಗ್ಲಾಸ್ ಹೊಡೆದು ಹಲ್ಲೆ ಮಾಡಲು ಮುಂದಾಗಿರುವಂತ ಘಟನೆ ನಡೆದಿದೆ.
ಕಾರು ಟಚ್ ಆಗಿದ್ದಕ್ಕೆ ಸಾರಿ, ನಮ್ಮದೇ ತಪ್ಪಿದೆ ಅಂತ 5 ಸಾವಿರ ಹಣ ಕೊಟ್ಟರು ಬಿಡದ ಯುವಕ, ಕಾರು ಟಚ್ ಮಾಡಿದ್ದಕ್ಕೆ ಕಾರಿನ ಗ್ಲಾಸನ್ನೇ ಸಂಪೂರ್ಣ ಹೊಡೆದು ಹಾಕಿ ಅಲ್ಲಿಂದ ತೆರಳಿರೋದಾಗಿ ತಿಳಿದು ಬಂದಿದೆ.
ವಾರದ ಹಿಂದಿನ ಈ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರೋಡ್ ರೇಜ್ ಮಾಡಿದಾತನ ಮೇಲೆ ಕೇಸ್ ಹಾಕಿ, ಬಂಧಿಸುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.
BREAKING: ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಬಂದ ಅಧಿಕಾರಿಗಳ ಮುಂದೆಯೇ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಯತ್ನ
BREAKING : 11 ಮಂದಿ `DYSP’ (ಸಿವಿಲ್) ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ | DYSP Transfer