ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೇಣಗ ಬಳಿ ಇಂಡಸ್ಟ್ರಿಸ್ ಕಾರ್ಖಾನೆಯಲ್ಲಿ ವಿಷಕಾರಿ ರಸಾಯನಿಕ ಸೋರಿಕೆಯಾಗಿ ಕಾರ್ಮಿಕರು ಅಸ್ವಸ್ಥರಾಗಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಅಸ್ವಸ್ಥ ಗೊಂಡ ಕಾರ್ಮಿಕರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ಹೌದು ಕಾರ್ಖಾನೆಯಲ್ಲಿ ರಸಾಯನಿಕ ಸೋರಿಕೆಯಿಂದ 11ಕಾರ್ಮಿಕರು ಅಸ್ವಸ್ಥರಾಗಿದ್ದರು. ಇದೀಗ ಅಸ್ವಸ್ಥಗೊಂಡ ಕಾರ್ಮಿಕರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.ಆದಿತ್ಯ ಬಿರ್ಲಾ ಗ್ರೂಪ್ನ ಗ್ರಾಸಿಮ್ ಇಂಡಸ್ಟ್ರಿಯಲ್ಲಿ ಈ ಒಂದು ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೆಣಗ ಬಳಿಯ ಇಂಡಸ್ಟ್ರೀಸ್ ನಲ್ಲಿ ಈ ಒಂದು ದುರಂತ ಸಂಭವಿಸಿದೆ.
ಅಸ್ವಸ್ಥ ಕಾರ್ಮಿಕರಿಗೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಇದೀಗ ಚಿಕಿತ್ಸೆ ನೀಡಲಾಗುತ್ತಿದೆ. ಕಾಸ್ಟಿಕ್ ಸೋಡಾ ಉತ್ಪಾದಿಸುವ ಗ್ರಾಸಿಂ ಇಂಡಸ್ಟ್ರೀಸ್ ನಲ್ಲಿ ಘಟನೆ ನಡೆದಿದ್ದು, ಈ ಕುರಿತು ಕಾರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಪನಿ ಬೇ ಜವಾಬ್ದಾರಿಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ ಕಾರ್ಖಾನೆ ಸ್ಥಗಿತಗೊಳಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ ಪ್ಲಾಂಟ್ ನಲ್ಲಿರುವ ಸಿಬ್ಬಂದಿಯನ್ನು ಹೊರ ಕಳಿಸುವಂತೆ ಒತ್ತಾಯಿಸುತ್ತಿದ್ದಾರೆ ಇಷ್ಟು ದೊಡ್ಡ ಘಟನೆ ನಡೆದಿದ್ದರೂ ಕೂಡ ಇದುವರೆಗೂ ಕಾರ್ಖಾನೆ ಸೈರನ್ ಮೊಳಗಿಸಿಲ್ಲ ಎಂದು ನಗರಸಭೆಯ ಸದಸ್ಯ ಶ್ವೇತಾ ನಾಯಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.