ವಿಜಯಪುರ : ಬೀದರ್ ಜಿಲ್ಲೆಯ ಯುವ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇತ್ತೀಚಿಗೆ ಕಲಬುರ್ಗಿಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಪ್ರತಿಭಟನೆ ನಡೆಯಿತು. ಆದರೆ ಈ ಒಂದು ಪ್ರತಿಭಟನೆಯಲ್ಲಿ ಬಿಜೆಪಿ ಬಿವೈ ವಿಜಯೇಂದ್ರ ಭಾಗಿಯಾಗಿರಲಿಲ್ಲ. ಈ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿವೈ ವಿಜಯೇಂದ್ರಗೆ ಸಚಿವ ಪ್ರಿಯಾಂಕ್ ಖರ್ಗೆ ಬೆದರಿಕೆ ಹಾಕಿದ್ದರು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಲ್ಬುರ್ಗಿಯಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಹೋರಾಟ ನಡೆಯಿತು. ಆ ಹೋರಾಟಕ್ಕೆ ವಿಜಯೇಂದ್ರ ಯಾಕೆ ಬರಲಿಲ್ಲ? ಯಾಕೆ ಅಂದ್ರೆ ವಿಜಯೇಂದ್ರಗೆ ಪ್ರಿಯಾಂಕ ಖರ್ಗೆ ಬೆದರಿಕೆ ಹಾಕಿದ್ದರು. ನಿಮ್ಮ ತಂದೆಯವರದು ಎಲ್ಲಾ ತೆಗಿತೀನಿ ಅಂತ ಪ್ರಿಯಾಂಕ್ ಖರ್ಗೆ ವಿಜಯೇಂದ್ರಗೆ ಬೆದರಿಕೆ ಹಾಕಿದ್ದರು. ಹೀಗಾಗಿ ವಿಜಯೇಂದ್ರ ಕಲಬುರ್ಗಿ ಹೋರಾಟಕ್ಕೆ ಬರಲಿಲ್ಲ. ಹೋರಾಟಗೆ ಯಾಕೆ ಬರಲಿಲ್ಲ ಎಂದು ಬಿ ವೈ ವಿಜಯೇಂದ್ರ ಹೇಳಬೇಕು ಎಂದು ವಿಜೇಂದ್ರ ವಿರುದ್ಧ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಇನ್ನು ಸಿಟಿ ರವಿಗೆ ಕೊಲೆ ಬೆದರಿಕೆ ಪತ್ರದ ಕುರಿತು, ಒಬ್ಬ ಜನಪ್ರತಿನಿಧಿಗೆ ಭದ್ರತೆ ಇಲ್ಲದಿರುವ ಕರ್ನಾಟದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಅನ್ನೋದನ್ನು ಅರ್ಥಮಾಡಿಕೊಳ್ಳಬಹುದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಟಿ ರವಿಗೆ ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಹೇಳಿದರು.
ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದವರ ಮೇಲೆ ಲಾಠಿಚಾರ್ಜ್ ಮಾಡಿದ್ದನ್ನು ಗೃಹ ಸಚಿವ ಜಿ ಪರಮೇಶ್ವರ್ ಸಮರ್ಥಿಸಿಕೊಳ್ಳುತ್ತಾರೆ.ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಬರುತ್ತಿದ್ದವರನ್ನು ಮತ್ತೇನು ಮುತ್ತು ಕೊಡಲಾದೀತೆ ಎಂದು ಸಚಿವ ಹೇಳುತ್ತಾರೆ, ಅವರು ಹಿಂದೂಗಳಿಗೆ ಮುತ್ತಿಡುವುದು ಬೇಡ, ಸಾಬರಿಗೆ ಮಾತ್ರ ಮುತ್ತಿಡಲಿ ಎಂದು ಯತ್ನಾಳ್ ಹೇಳಿದರು.