ಬೆಂಗಳೂರು : ಕನ್ನಡದ ಖ್ಯಾತ ರ‍್ಯಾಪರ್ ಚಂದನ್ ಶೆಟ್ಟಿ ಅವರು ಕಾಟನ್ ಕ್ಯಾಂಡಿ ಸಾಂಗ್ ನಲ್ಲಿ ಈ ಹಿಂದೆ ಇದ್ದಂತಹ ಇನ್ನೊಂದು ಹಾಡಿನ ಟ್ಯೂನ್ ಕಾಪಿ ಮಾಡಿದ್ದಾರೆ ಎಂದು ರ‍್ಯಾಪರ್ ಯುವರಾಜ್ ಚಂದನ್ ಶೆಟ್ಟಿ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ.ಇದೀಗ ನಾನು ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಯುವರಾಜ್ ತಿಳಿಸಿದ್ದಾರೆ.
ಹೌದು ಕಾಟನ್ ಕ್ಯಾಂಡಿ ಹಾಡಿನಲ್ಲಿ ಟ್ಯೂನ್ ಬಳಸಿರುವ ಆರೋಪ ಕೇಳಿ ಬಂದಿದೆ.ಆರು ವರ್ಷದ ಹಿಂದೆಯೇ ಯುವರಾಜ್ ‘ವೈಬುಲ್’ ಸಾಂಗ್ ಕಂಪೋಸ್ ಮಾಡಿದ್ದರು. ಯುವರಾಜ್ ಮಾಡಿದ ಸಾಂಗ್ ಅನ್ನು ಚಂದನ್ ಶೆಟ್ಟಿ ಹಾಡಿನ ಟ್ಯೂನ್ ಕದ್ದ ಆರೋಪ ಕೇಳಿ ಬಂದಿದೆ. ಚಂದನ್ ಶೆಟ್ಟಿ ವಿರುದ್ಧ ಕಾಟನ್ ಕ್ಯಾಂಡಿ ಟ್ಯೂನ್ ಕದ್ದಿರುವ ಆರೋಪ ಕೇಳಿ ಬಂದಿದೆ.
ನನ್ನ ಸಾಂಗ್ ಅನ್ನು ಪಲ್ಲವಿ ಹಾಗೂ ಚರಣ್ ಕಾಪಿ ಮಾಡಿದ್ದರು. ನನ್ನ ಹಾಡು ಚಂದನ್ ಶೆಟ್ಟಿ ಮಾಡಿರುವ ಹಾಡನ್ನು ಒಮ್ಮೆ ನೋಡಿ. ಚಂದನ್ ಶೆಟ್ಟಿ ಕೇಳಿದರೆ ನಾನೇ ಬಿಟ್ಟುಕೊಡುತ್ತಿದ್ದೆ. ನಾನು ಬಡವ 12 ಲಕ್ಷ ರೂಪಾಯಿ ಖರ್ಚು ಮಾಡಿ ಸಾಂಗ್ ಮಾಡಿದ್ದೆ.ನಾನು ಆರು ವರ್ಷಗಳ ಹಿಂದೆ ‘ವೈ ಬುಲ್’ ಸಾಂಗ್ ಮಾಡಿದ್ದೆ. ಅದೇ ಟ್ಯೂನ್ ಬಳಸಿ ಚಂದನ್ ಶೆಟ್ಟಿ ಅವರು ಈಗ ಕಾಟನ್ ಕ್ಯಾಂಡಿ ಮಾಡಿದ್ದಾರೆ. ಆದ್ದರಿಂದ ನಾನು ಈಗ ದೂರು ನೀಡಲು ಸಜ್ಜಾಗಿದ್ದೇನೆ ಎಂದರು.
ಈ ವಿಚಾರವಾಗಿ ಪ್ರತಿಕ್ರಿಸಿದ ಚಂದನ್ ಶೆಟ್ಟಿ, ಕಾಟನ್ ಕ್ಯಾಂಡಿ ಹಾಡಿನಲ್ಲಿ ಯುವರಾಜ್ ಟ್ಯೂನ್ ಬಳಕೆ ಆರೋಪ ಕೇಳಿ ಬಂದಿದೆ. ನಾನು ಟ್ಯೂನ್ ಕಾಪಿ ಮಾಡಿಲ್ಲವೆಂದು ನನ್ನ ಆತ್ಮಕ್ಕೆ ಗೊತ್ತಿದೆ ಎಂದು ಚಂದನ್ ಶೆಟ್ಟಿ ಹೇಳಿಕೇ ನೀಡಿದ್ದಾರೆ.ಬೇರೆಯವರ ಟ್ಯೂನ್ ಕದಿಯಬಾರದು ಎಂಬ ಜ್ಞಾನ ನನಗೆ ಇದೆ. ಯುವರಾಜ್ ಸಿಂಗರ್ ಅನ್ನೋ ವಿಚಾರ ಬಿಟ್ಟು ಬೇರೆ ಗೊತ್ತಿಲ್ಲ. ಯುವರಾಜ್ ಆರೋಪಕ್ಕೆ ಕಾನೂನು ಮೂಲಕ ಉತ್ತರಿಸುತ್ತೇನೆ ಎಂದು ಚಂದನ್ ಶೆಟ್ಟಿ ತಿಳಿಸಿದ್ದಾರೆ.