ಹುಬ್ಬಳ್ಳಿ : ದೇಶದಲ್ಲಿ ಕಾಂಗ್ರೆಸ್ ಅಯೋಮಯ ಸ್ಥಿತಿಗೆ ತಲುಪಿದೆ. ದೆಹಲಿ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತದೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಲಿದೆ. ಕಾಂಗ್ರೆಸ್ ಪ್ರಾದೇಶಿಕ ಪಕ್ಷ ಆಗುವ ಹಂತಕ್ಕೆ ತಲುಪಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಒಳ ಜಗಳದಿಂದ ಆಡಳಿತದ ಮೇಲೆ ಪರಿಣಾಮ ಬೀರಿದೆ. ಈ ಸರ್ಕಾರದಲ್ಲಿ ಅನೇಕ ಭ್ರಷ್ಟಾಚಾರ ಹಗರಣಗಳು ನಡೆಯುತ್ತಿವೆ. ಸರ್ಕಾರ ಆಡಳಿತ ಯಂತ್ರದ ನಿಯಂತ್ರಣ ಕಳೆದುಕೊಂಡಿದೆ. ಕೆಎಸ್ಆರ್ಟಿಸಿ ಅಂಗ ಸಂಸ್ಥೆಗಳು ಬಾಗಿಲು ಹಾಗೂ ಹಂತಕ್ಕೆ ಬಂದಿವೆ. ಅಲ್ಲದೆ ಕಲಬುರ್ಗಿಯಲ್ಲಿ ಗುತ್ತಿಗೆದಾರನ ಆತ್ಮಹತ್ಯೆಯಾಗಿದೆ.
ಬಸ್ ಅದರ ಏರಿಸಿ ಜನರ ಮೇಲೆ ಹೊರೆ ಹೊರೆಸಿದ್ದಾರೆ ಎಂದರು.
ಡಿಸಿಎಂ ಡಿಕೆ ಶಿವಕುಮಾರ್ ಶತ್ರುಸಂಹಾರ ಮಾಡುತ್ತಾರೆ. ಹಾಗಾದರೆ ಅವರ ಪ್ರಕಾರ ಅವರ ಶತ್ರುಗಳು ಯಾರು? ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ ಎಲ್ಲರೂ ಪ್ರತಿಸ್ಪರ್ಧಿಗಳು. ಶತ್ರುಗಳು ಯಾರು ಅಂತ ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಬೇಕು. ಸಿಎಂ ಸಿದ್ದರಾಮಯ್ಯನವರ, ಡಾ. ಜಿ ಪರಮೇಶ್ವರರಾ? ಅಂತ ಹೇಳಬೇಕು.
ನಾವು ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಅವರನ್ನು ಶತ್ರುಗಳೆಂದು ಭಾವಿಸಿಲ್ಲ. ಪ್ರತಿಸ್ಪರ್ಧಿಗಳೆಂದು ಭವಿಸಿದ್ದೇವೆ. ಇದನ್ನು ನಮಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಲಿಸಿದ್ದಾರೆ.ನಾವು ಯಾರನ್ನು ವೈರಿಗಳೆಂದು ಭಾವಿಸಿಲ್ಲ ಅಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.