ಉತ್ತರಕನ್ನಡ : ಕಳೆದ ಮೂರು ದಿನಗಳ ಹಿಂದೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಜಮೀರ್ ಅಹ್ಮದ್ ದರ್ಗಾವಾಲೆ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಸಿನಿಮಾ ಸ್ಟೈಲ್ ನಲ್ಲಿ ಒಟ್ಟು 10 ಆರೋಪಿಗಳನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು ಜಮೀರ್ ಅಹಮದ್ ದರ್ಗಾ ವಲೆ ಕಿಡ್ನಾಪ್ ಕೇಸ್ ಗೆ ಸಂಬಂಧಪಟ್ಟಂತೆ ಸಿನಿಮಾ ಸ್ಟೈಲಲ್ಲಿ 10 ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 18 ಲಕ್ಷ ರೂಪಾಯಿ ಹಣವನ್ನು ಪೊಲೀಸರು ಇದೆ ವೇಳೆ ಜಪ್ತಿ ಮಾಡಿಕೊಂಡಿದ್ದಾರೆ. ಶಿರಸಿ ಡಿವೈಎಸ್ಪಿ ಗಣೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಚಿಕ್ಕೋಡಿಯಲ್ಲಿ ನಿನ್ನೆ ಬೆಳಿಗ್ಗೆ 5 ಜನರನ್ನು ಅರೆಸ್ಟ್ ಮಾಡಲಾಗಿದ್ದು, ಇನ್ನು ನಿನ್ನೆ ರಾತ್ರಿ ಯಲ್ಲಾಪುರದ ಬಳಿ ಇನ್ನುಳಿದ ಐವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಜಮೀರ್ ಅಹ್ಮದ್ ದರ್ಗಾವಾಲೆ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಹಾಗೂ ಹಣವಿದ್ದ ಕಾರು ಪ್ರತ್ಯೇಕವಾಗಿ ಪರಾರಿಯಾಗಿದ್ದರು. ಸಿಕ್ಕ ಆರೋಪಿಗಳ ಮೂಲಕ ಪ್ರಮುಖ ಆರೋಪಿ ಜಾಗ ಪತ್ತೆಯಾಗಿತ್ತು. ಪ್ರಮುಖ ಆರೋಪಿ ಯಲ್ಲಾಪುರದ ಅರಣ್ಯ ಪ್ರದೇಶದಲ್ಲಿದ್ದ ಎನ್ನಲಾಗಿದೆ. ಅವರನ್ನು ಬೆನ್ನಟ್ಟಿ ಹೋದಾಗ ಈ ವೇಳೆ ಪೋಲೀಸರ ಮೇಲೆ ಕಾರದ ಪುಡಿ ಎರಚಿ ಹಲ್ಲೆ ಮಾಡಿದ್ದರು.ಸಂಜೆಯಾಗಿದ್ದರಿಂದ ಕಾಡಿನಲ್ಲಿ ಪರಾರಿಯಾಗಲು ಆರೋಪಿಗಳು ಯತ್ನಿಸಿದ್ದರು. ಇದೇ ಸಂದರ್ಭದಲ್ಲಿ ಮಾರಕಾಸ್ತ್ರಗಳಿಂದ ಪೊಲೀಸರ ಕಾಲಿಗೆ ಆರೋಪಿಗಳು ಹೊಡೆದಿದ್ದಾರೆ.
ಅನಿವಾರ್ಯವಾಗಿ ಇಬ್ಬರ ಮೇಲೆ ಪೊಲೀಸರು ಫೈರ್ ಮಾಡಿದ್ದಾರೆ ಇಬ್ಬರು ಪೊಲೀಸರು ಹಾಗೂ ಆರೋಪಿಗಳಿಗೆ ಗಂಭೀರವಾದ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಆರೋಪಿಗಳನ್ನು ಕಾರವಾರ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಮುಖ ಆರೋಪಿಯನ್ನು ಬೆನ್ನಟ್ಟಿದ ಪೊಲೀಸರಿಗೆ ಗಂಭೀರವಾದ ಗಾಯಗಳಾಗಿವೆ.ಕಾನ್ಸ್ಟೇಬಲ್ ನೀಲಮ್ಮ ನವರ ಇನ್ಸ್ಪೆಕ್ಟರ್ ರಂಗನಾಥ ಕೆ ಗಾಯಗಳಾಗಿದ್ದು, ಅಪಾಹರಣವಾಗಿದ್ದ ಜಮೀರ್ ದರ್ಗಾ ವಾಲೆ ಕುಟುಂಬಕ್ಕೆ ಆರೋಪಿಗಳು ಡಿಮ್ಯಾಂಡ್ ಮಾಡಿದ್ದರು.
ಕುಟುಂಬಕ್ಕೆ 35 ಲಕ್ಷ ಬೇಡಿಕೆ ಇಟ್ಟಿದ್ದ ಆರೋಪಿಗಳು, ಜಮೀರ್ ದರ್ಗಾ ವಾಲೆ ಕಾಲನ್ನು ಚಾಕುವಿನಿಂದ ಗಾಯಗೊಳಿಸಿದ್ದರು. ಕೊನೆಗೆ ಅಪಹರಣಕಾರರಿಗೆ 18 ಲಕ್ಷ ರೂಪಾಯಿ ನೀಡಲಾಗಿತ್ತು. ಜಮೀರ್ ನನ್ನ ಗದಗದ ನಾಲ್ವಡಿ ಚೆಕ್ಪೋಸ್ಟ್ ಬಳಿ ಬಿಟ್ಟು ಆರೋಪಿಗಳು ಪರಾಗಿದ್ದರು ಮೊನ್ನೆ ರಾತ್ರಿ ಜಮೀರ್ ಅಹ್ಮದ್ ದರ್ಗಾ ವಲಿ ಅಪಹರಣವಾಗಿತ್ತು ಮುಂಡಗೋಡದಲ್ಲಿ ಜಮೀರ್ ಅಹ್ಮದ್ ದರ್ಗಾಬಾಲೆ ಕಿಡ್ನಾಪ್ ಆಗಿತ್ತು.