ಬೆಂಗಳೂರು : ಮಾಜಿ ಸಂಸದ ಡಿಕೆ ಸುರೇಶ್ ಸಹೋದರಿ ಎಂದು ಹೇಳಿ ವಂಚನೆ ಎಸಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿ ಐಶ್ವರ್ಯ ಗೌಡ ವಂಚನೆ ಪ್ರಕರಣದ ಕುರಿತು ಶಾಸಕ ವಿನಯ್ ಕುಲಕರ್ಣಿ ಬಳಸುತ್ತಿದ್ದ ಕಾರನ್ನು ಸೀಜ್ ಮಾಡಲಾಗಿದೆ. ವಿನಯ್ ಕುಲಕರ್ಣಿ ಬಳಸುತ್ತಿದ್ದ ಕಾರನ್ನು ಇದೀಗ ಪೊಲೀಸರು ಸೀಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಐಶ್ವರ್ಯ ಪತಿ ಹರೀಶ್ ಗೌಡ ಹೆಸರಲಿದ್ದ ಮತ್ತೊಂದು ಕಾರು ಇದೀಗ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ದಿನ ಐಶ್ವರ್ಯ ಬಳಿ ಇದ್ದಂತಹ ಮೂರು ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದು, ಈ ಹಿಂದೆ ಐಶ್ವರ್ಯ ಪತಿ ಹರೀಶ್ ಹೆಸರಿನಲ್ಲಿದ್ದ ಮೂರು ಐಷಾರಾಮಿ ಕಾರುಗಳನ್ನು ಸೀಸ್ ಮಾಡಿದ್ದರು. ಇದೀಗ ಶಾಸಕ ವಿನಯ್ ಕುಲಕರ್ಣಿ ಅವರು ಬಳಸುತ್ತಿದ್ದ ಕಾರನ್ನು ಕೂಡ ಪೊಲೀಸರು ಸೀಜ್ ಮಾಡಿದ್ದಾರೆ. ಆಡಿ, ಬಿಎಂಡಬ್ಲ್ಯೂ ಹಾಗೂ ಫಾರ್ಚುನರ್ ಕಾರನ್ನು ಸೀಜ್ ಮಾಡಿದ್ದರು. ಇದೀಗ ಮತ್ತೊಂದು ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ .
ವಂಚನೆ ಮಾಡಿದ ಹಣದಿಂದ ಐಶ್ವರ್ಯ ಗೌಡ ಕಾರು ಖರೀದಿಸಿದ್ದಳು. ಶಾಸಕ ವಿನಯ್ ಕುಲಕರ್ಣಿಗೆ ಇದೆ ವಂಚನೆ ಹಣದಿಂದ ಐಶ್ವರ್ಯ ಗೌಡ ಕಾರನ್ನು ಗಿಫ್ಟ್ ಆಗಿ ನೀಡಿದ್ದಳು ಎನ್ನಲಾಗಿದೆ. ಇದೀಗ ಕುಲಕರ್ಣಿ ಬಳಿ ಇದ್ದ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಸೀಜ್ ಮಾಡಿದ ಕಾರನ್ನು ಇದೀಗ ಪೊಲೀಸರು ಆರ್ ಆರ್ ನಗರ ಠಾಣೆಗೆಯಲ್ಲಿ ತಂದು ನಿಲ್ಲಿಸಿದ್ದಾರೆ.