ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿಬಿಳಿಸುವಂತಹ ಘಟನೆ ನಡೆದಿದ್ದು, ಕೇರಳ ಮೂಲದ ಯುವಕನೊಬ್ಬ ಬೆಂಗಳೂರಿನ ಮಹದೇವಪುರದಲ್ಲಿ ಪಿಜಿ ಒಂದರಲ್ಲಿ ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಹೌದು ಕೇರಳ ಮೂಲದ ಜಿತಿನ್ ಎನ್ನುವ ಯುವಕನೊಬ್ಬ ಬೆಂಗಳೂರಿಗೆ ಕೆಲಸ ಅರಿಸಿಕೊಂಡು ಬಂದಿದ್ದ. ಈ ವೇಳೆ ಮನೆಯಲ್ಲಿ ಅವರ ತಂದೆಗೆ ಕ್ಯಾನ್ಸರ್ ಇತ್ತು.ಅಲ್ಲದೆ ಮನೆಯ ಇನ್ನು ಕೆಲವು ಸಮಸ್ಯೆಗಳಿಂದ ಯುವಕ ಬೇಸತ್ತು ಹೋಗಿದ್ದ. ಇದರ ನಡುವೆ ತನ್ನ ಪ್ರಿಯತಮೆ ಜೊತೆಗೆ ಜಗಳ ಮಾಡಿಕೊಂಡಿದ್ದ ಎನ್ನಲಾಗಿದೆ.
ಈ ವೇಳೆ ಪ್ರಿಯತಮೆ ಜೊತೆಗೆ ಜಗಳ ಮಾಡಿಕೊಂಡು ರಾತ್ರಿ ಜಿತಿನ್ ಮದ್ಯ ಸೇವಿಸಿದ್ದಾನೆ. ಬಳಿಕ ನಶೆಯಲ್ಲಿ ಪ್ರಿಯತಮೆ ಜಜೊತೆ ಜಗಳವಡುತ್ತಲೇ, ಕೈ ಕುಯ್ದು ಕೊಂಡಿದ್ದಾನೆ. ಈ ವಿಚಾರ ಪ್ರಿಯತಮೆಗೆ ತಿಳಿದು ತಕ್ಷಣ ಹಾಗೆ ಮಹದೇವಪುರ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾಳೆ. ಬಿಟ್ ನಲ್ಲಿ ಇರುವಂತಹ ಮಹದೇವಪುರ ಠಾಣೆಯ ಪಿಎಸ್ಐ ಪರಶುರಾಮ್ ಹಾಗೂ ಮಲ್ಲೇಶ್ ತಕ್ಷಣ ಪೀಜಿಗೆ ಧಾವಿಸಿ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಘಟನೆ ಕುರಿತು ಮಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.