ಅಹ್ಮದಾಬಾದ್ : 3ನೇ ತರಗತಿಯಲ್ಲಿ ಓದುತ್ತಿದ್ದ 8 ವರ್ಷದ ಬಾಲಕಿಯೊಬ್ಬಳು ತನ್ನ ಶಾಲೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಗುಜರಾತ್’ನ ಅಹ್ಮದಾಬಾದ್’ನಲ್ಲಿ ನಡೆದಿದೆ.
ಅಹಮದಾಬಾದ್’ನ ಥಾಲ್ಟೆಜ್ ಪ್ರದೇಶದಲ್ಲಿರುವ ಜೆಬರ್ ಮಕ್ಕಳ ಶಾಲೆಯಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಆಕೆಯ ಸಾವಿನ ಹಿಂದಿನ ನಿಖರ ಕಾರಣವನ್ನು ತಿಳಿಯಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ.
“ಗಾರ್ಗಿ ರಣಪಾರಾ ಎಂಬ ಬಾಲಕಿ ಬೆಳಿಗ್ಗೆ ತನ್ನ ತರಗತಿಗೆ ಹೋಗುವಾಗ ಲಾಬಿಯಲ್ಲಿ ಕುರ್ಚಿಯ ಮೇಲೆ ಕುಳಿತ ಕೂಡಲೇ ಪ್ರಜ್ಞೆ ತಪ್ಪಿದಳು” ಎಂದು ಶಾಲೆಯ ಪ್ರಾಂಶುಪಾಲ ಶರ್ಮಿಷ್ಠಾ ಸಿನ್ಹಾ ತಿಳಿಸಿದ್ದಾರೆ.
ವಿದ್ಯಾರ್ಥಿಯ ಸಾವಿನ ಬಗ್ಗೆ ಶಾಲಾ ಆಡಳಿತ ಮಂಡಳಿ ಹೇಳಿದ್ದೇನು?
ಶಾಲಾ ಆಡಳಿತ ಮಂಡಳಿ ಹಂಚಿಕೊಂಡಿರುವ ಸಿಸಿಟಿವಿ ವೀಡಿಯೊದಲ್ಲಿ, ಎಂಟು ವರ್ಷದ ಬಾಲಕಿ ಶಾಲೆಯ ಲಾಬಿಯಲ್ಲಿ ನಡೆಯುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಬಾಲಕಿ ತನ್ನ ತರಗತಿಗೆ ಹೋಗುವಾಗ ಅಸ್ವಸ್ಥತೆಯನ್ನ ಅನುಭವಿಸುತ್ತಾಳೆ ನಂತ್ರ ಲಾಬಿಯಲ್ಲಿ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾಳೆ. ಪ್ರಜ್ಞೆ ತಪ್ಪಿದ ನಂತರ ಕುರ್ಚಿಯಿಂದ ಜಾರುವುದನ್ನ ಕಾಣಬಹುದು. ಬಾಲಕಿ ಕುಸಿದು ಬಿದ್ದಾಗ ಶಿಕ್ಷಕರು ಮತ್ತು ಇತರ ವಿದ್ಯಾರ್ಥಿಗಳು ಓಡಿ ಬರುವುದನ್ನ ನೋಡಬಹುದು.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಇಲ್ಲಿವೆ.!
8-year-old girl dies of suspected cardiac arrest in school in Ahmedabadhttps://t.co/tMYKhXSKq9 pic.twitter.com/gpoOl7BUWs
— DeshGujarat (@DeshGujarat) January 10, 2025
‘SBI’ ಅದ್ಭುತ ಯೋಜನೆ ; ₹50 ಸಾವಿರ ಠೇವಣಿ ಮಾಡಿ, 19 ಲಕ್ಷ ರೂಪಾಯಿ ಪಡೆಯಿರಿ!
ಈ ನಾಲ್ಕು ‘ಪದಾರ್ಥ’ಗಳನ್ನ ‘ಫ್ರಿಡ್ಜ್’ನಲ್ಲಿಟ್ಟರೆ 24 ಗಂಟೆಯೊಳಗೆ ವಿಷವಾಗುತ್ತೆ ; ಬೀ ಕೇರ್ಫುಲ್