ಬೆಳಗಾವಿ: ಆ ಗ್ರಾಮಸ್ಥರಿಗಿದ್ದಂತ ಕಂದಾಯ ಭೂಮಿಯನ್ನು 11ಎ ನಕ್ಷೆ ಮಂಜೂರಾತಿಯ ನಿಯಮವನ್ನು ಉಲ್ಲಂಘಿಸಿ, ಸರಿಯಾಗಿ ಮಂಜೂರಾತಿ ಪರಿಶೀಲಿಸದೇ ನಿರ್ಲಕ್ಷ್ಯವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ತೋರಿದ್ದರು. ಈ ಹಿನ್ನಲೆಯಲ್ಲಿ ಕಂದಾಯ ಇಲಾಖೆಯ ಆಯುಕ್ತರು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಈ ಸಂಬಂಧ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಆಯುಕ್ತ ಜೆ.ಮಂಜುನಾಥ್ ಆದೇಶಿಸಿದ್ದಾರೆ. ಬೆಳಗಾವಿಯ ಹುನಗುಂದ ಗ್ರಾಮದ ಸರ್ವೆ ನಂ.3ರಲ್ಲಿ 508 ಎಕರೆ 20 ಗುಂಜೆ ಜಮೀನಿಗೆ 11ಎ ನಕ್ಷೆ ಮಾಡಿಕೊಡಲು ನಿರ್ಲಕ್ಷ್ಯವನ್ನು ವಹಿಸಿದ್ದ ಬಗ್ಗೆ ದೂರು ನೀಡಲಾಗಿತ್ತು. ಹುನಗುಂದ ಗ್ರಾಮಸ್ಥರು ಕಂದಾಯ ಇಲಾಖೆಯ ಆಯುಕ್ತರಿಗೆ ದೂರು ನೀಡಿದ್ದರು.
11ಎ ನಕ್ಷೆ ಮಂಜೂರಾತಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ತೋರಿದಂತ ನಿರ್ಲಕ್ಷ್ಯದಿಂದ ಭೂಮಿಯನ್ನು ಕಳೆದುಕೊಳ್ಳುವ ಹಂತಕ್ಕೆ ಹುನಗುಂದ ಗ್ರಾಮಸ್ಥರು ಬಂದು ನಿಂತಿದ್ದರು. ಹೀಗಾಗಿ ನಕಲಿ ದಾಖಲೆ ಸೃಷ್ಠಿಸಿ ನೀಡಿದ್ದರೂ ಕಂದಾಯ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಸೂಕ್ತ ರೀತಿಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಮನವಿಯನ್ನು ಕಂದಾಯ ಇಲಾಖೆ ಆಯುಕ್ತರಿಗೆ ಮಾಡಿದ್ದರು.
ಈ ಹಿನ್ನಲೆಯಲ್ಲಿ ಕಂದಾಯ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆಯುಕ್ತ ಜೆ.ಮಂಜುನಾಥ್ ಆದೇಶಿಸಿದ್ದಾರೆ. ಈ ಮೂಲಕ ನಕಲಿ ದಾಖಲೆ ಸೃಷ್ಠಿಸಿ ಭೂಮಿ ಹೊಡೆಯಲು ಮುಂದಾದವರಿಗೆ ಸಹಕರಿಸಿದಂತ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.
20 ವರ್ಷಗಳಿಂದ ನೀವೇ ಮುಡಾ ಸದಸ್ಯರಾಗಿದ್ದೀರಿ, ಆದ್ರೂ ಯಾಕಿಂಗಾಯ್ತು?: ಸಿಎಂ ಸಿದ್ಧರಾಮಯ್ಯ ಪ್ರಶ್ನೆ
BREAKING: ನಟ ದರ್ಶನ್ ಗೆ ಮತ್ತೊಂದು ರಿಲೀಫ್: ಮೈಸೂರಿಗೆ ತೆರಳು 5 ದಿನ ಕೋರ್ಟ್ ಅನುಮತಿ | Actor Darshan