ವಿಜಯಪುರ : ವಿಜಯಪುರ ಜಿಲ್ಲೆಯ ಕೊರ್ತಿ ಕೋಲಾರ ಎಂಬಲ್ಲಿ ಎದುರುಗಡೆ ಮನೆಯಲ್ಲಿದ್ದ ಯುವತಿಯನ್ನು ಪ್ರೀತಿಸಿದ್ದಕ್ಕಾಗಿ ಯುವಕನ ಮೇಲೆ ಸುಮಾರು 12 ಜನರು ಭೀಕರವಾಗಿ ಹಲ್ಲೆ ನಡೆಸಿದ್ದರು. ಬಳಿಕ ಯುವಕನನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಿಸಿದೆ ಯುವಕ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿತ ಯುವಕ ಮೃತಾಪಟ್ಟಿದ್ದಾನೆ. ಜನವರಿ 7ರಿಂದ ವಿಜಯಪುರ ಜಿಲ್ಲೆಯ ಕೋಲಾರ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿತ್ತು. ಎದುರು ಮನೆಯ ಯುವತಿಯನ್ನು ರಾಘವೇಂದ್ರ ಕಂಬಾರ ಎನ್ನುವತ ಪ್ರೀತಿಸುತ್ತಿದ್ದ. ರಾಘವೇಂದ್ರ ಪ್ರೀತಿಸುವ ವಿಚಾರ ಯುವತಿಯ ಮನೆಯವರಿಗೆ ಗೊತ್ತಾಗಿತ್ತು ಇದೇ ವಿಚಾರಕ್ಕೆ ಯುವಕ ಯುವತಿ ತಾಯಿಯ ನಡುವೆ ಜಗಳವಾಗಿತ್ತು.
ರಾಘವೇಂದ್ರನನ್ನು ಮನೆ ಬಳಿಯ ದೇವಸ್ಥಾನಕ್ಕೆ ಕರೆಸಿ ಕೊಂಡು ಹಲ್ಲೆ ನಡೆಸಲಾಗಿದೆ.ರಾಘವೇಂದ್ರ ಕಂಬಾರ ಮೇಲೆ ಸುಮಾರು 12 ಜನರು ಭೀಕರವಾಗಿ ಹಲ್ಲೆ ಮಾಡಿದ್ದರು.ರಾಘವೇಂದ್ರನನ್ನು ಬಾಗಲಕೋಟೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಿನ್ನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳಿಗ್ಗೆ ಚಿಕಿತ್ಸೆ ಫಲಿಸಿದೆ ರಾಘವೇಂದ್ರ ಕಂಬಾರ್ (24) ಸಾವನ್ನಪ್ಪಿದ್ದಾನೆ ಕೋಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.