ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬೇಕರಿ ಸಿಬ್ಬಂದಿಯ ಮೇಲೆ ಪುಂಡರು ಭೀಕರವಾಗಿ ಹಲ್ಲೆ ನಡೆಸಿ, ಬೇಕರಿಯಲ್ಲಿನ ಹಲವು ವಸ್ತುಗಳನ್ನು ದೌರ್ಜನ್ಯ ಬರೆದಿದ್ದರು ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಸಂಜಯ್ ನಗರ ಠಾಣೆ ಪೋಲೀಸರು ಇಬ್ಬರು ಪುಂಡರನ್ನು ಅರೆಸ್ಟ್ ಮಾಡಿದ್ದಾರೆ.
ಹೌದು ಇಬ್ಬರು ಆರೋಪಿಗಳನ್ನು ಬಂಧಿಸಿದ ಸಂಜಯ್ ನಗರ ಠಾಣೆಯ ಪೊಲೀಸರು ಸಿಗರೇಟ್ ಕೊಡಲು ವಿಳಂಬ ಮಾಡಿದ್ದಕ್ಕೆ ಬೇಕರಿ ಸಿಬ್ಬಂದಿಯ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿದ ಆರೋಪಿಗಳನ್ನು ವಿಶ್ವಾಸ ಹಾಗೂ ಗುರುರಾಜ್ ಎಂದು ಗುರುತಿಸಲಾಗಿದ್ದು, ಇದೀಗ ಸಂಜಯ್ ನಗರ ಠಾಣೆಯ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ಕಳೆದ ಜನವರಿ 8 ರಾತ್ರಿ ಸಂಜಯ್ ನಗರದ ಭೂಪಸಂದ್ರದಲ್ಲಿ ಈ ಒಂದು ಘಟನೆ ನಡೆದಿತ್ತು. ಸುಮ್ಮನೆ ಕಿರಿಕ್ ಮಾಡಿ ಬೇಕರಿ ಒಳಗೆ ನುಗ್ಗಿ ಯುವಕನ ಮೇಲೆ ಇಬ್ಬರು ಹಲ್ಲೆ ಮಾಡಿದ್ದಾರೆ. ಜ್ಯೂಸ್ ಬಾಟಲ್ ನಿಂದ ಬೇಕರಿಯವರ ಮೇಲೆ ಹಲ್ಲೆ ಗೈದಿದ್ದ ಪುಂಡರು, ಈ ಕುರಿತು ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.