ಚಾಮರಾಜನಗರ : ಶಬರಿಮಲೆಗೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ, ಭೀಕರವಾದಂತಹ ಅಪಘಾತ ಸಂಭವಿಸಿದ್ದು, ಈ ಒಂದು ಅಪಘಾತದಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೂಲದ ಇಬ್ಬರು ಅಯ್ಯಪ್ಪ ಭಕ್ತರು ಸಾವನ್ನಪ್ಪಿದ್ದು, ಉಳಿದ ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ.
ಶಬರಿ ಮಲೆಯಿಂದ ಕೊಳ್ಳೇಗಾಲಕ್ಕೆ ವಾಪಸ್ ಬರುತ್ತಿದ್ದಾಗ ಈ ಒಂದು ಅಪಘಾತ ಸಂಭವಿಸಿದೆ.ಅಯ್ಯಪ್ಪ ಭಕ್ತರಾದ ನಾಗಣ್ಣ (66) ವೆಂಕಟದ್ರಿ (70) ಸಾವನ್ನಪ್ಪಿದ್ದರೆ, ಘಟನೆಯಲ್ಲಿ ಮಹೇಶ್ ಕುಮಾರ್, ಸ್ವಾಮಿ ಹಾಗೂ ದೊರೆಸ್ವಾಮಿಗೆ ಗಂಭೀರವಾದ ಗಾಯಗಳಾಗಿದ್ದು ಕೊಯಮತ್ತೂರು ಆಸ್ಪತ್ರೆಯಲ್ಲಿ ಮೂವರಿಗೂ ಚಿಕಿತ್ಸೆ ಮುಂದುವರೆದಿದೆ.