ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೋಷರೋಪ ನಿಗದಿ ಪಡಿಸುವ ಹಿನ್ನೆಲೆ ಇಂದು ಬೆಂಗಳೂರಿನ ಸೇಷನ್ಸ್ ಕೋರ್ಟಿಗೆ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಕೊಲೆಯ ಪ್ರಕರಣದ ಹಲವು ಆರೋಪಿಗಳು ಹಾಜರಾಗಿದ್ದಾರೆ.
ಹೌದು ಸೇಶನ್ ಕೋರ್ಟ್ ನಲ್ಲಿ ಇಂದು ದೋಷರೋಪ ನಿಗದಿ ಮಾಡುವ ಹಿನ್ನೆಲೆಯಲ್ಲಿ ನಟ ದರ್ಶನ್ ಮತ್ತು ಪವಿತ್ರ ಗೌಡ ಸೇರಿದಂತೆ ಕೊಲೆಯ ಪ್ರಕರಣದ ಉಳಿದ ಆರೋಪಿಗಳಾದಂತಹ ಪ್ರದೋಷ್, ನಾಗರಾಜ್, ಕೆಶವಮೂರ್ತಿ, ನಿಖಿಲ್ ನಾಯಕ್ ಸೇರಿದಂತೆ ಎಲ್ಲಾ 17 ಆರೋಪಿಗಳು ಇದೀಗ ಕೋರ್ಟಿಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.ಇನ್ನು ಕೋರ್ಟ್ ಹಾಲ್ ಗೆ ನ್ಯಾಯಾಧೀಶರು ಆಗಮಿಸಿದ್ದು ಕೆಲವೇ ಕ್ಷಣಗಳಲ್ಲಿ ವಿಚಾರಣೆ ಆರಂಭವಾಗಲಿದೆ.