ಬೆಂಗಳೂರು : ಇತ್ತೀಚಿಗೆ ವಿಚ್ಛೇದನ ಎನ್ನುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ. ಅದರಲ್ಲೂ ಸ್ಟಾರ್ ನಟ-ನಟಿ ಹಾಗೂ ಸ್ಟಾರ್ ಆಟಗಾರರ ದಂಪತಿಗಳೇ ಇದರಲ್ಲಿ ಮುಂದಿದ್ದಾರೆ. ಕಳೆದ ಕೆಲ ದಿನಗಳಿಂದ ಸ್ಟಾರ್ ದಂಪತಿಗಳ ಸಂಸಾರದಲ್ಲಿ ಬಿರುಕು ಮೂಡುತ್ತಿದ್ದು, ವಿಚ್ಛೇದನದ ಮೊರೆ ಹೋಗುತ್ತಿದ್ದಾರೆ. ಯಜುವೇಂದ್ರ ಚಹಲ್ ಹಾಗೂ ಧನಶ್ರೀ ಡಿವೋರ್ಸ ವಿಚಾರ ಇನ್ನೂ ಮಾಸದಿರುವ ನಡುವೆಯೇ ಖ್ಯಾತ ಸ್ಟಾರ್ ಕ್ರಿಕೆಟಿಗರೊಬ್ಬರ ಸಂಸಾರದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು ಕರ್ನಾಟಕ ಮೂಲದ ಕ್ರಿಕೆಟಗ ಮನೀಷ್ ಪಾಂಡೆ ಹಾಗೂ ಅವರ ಪತ್ನಿ ಆಶ್ರಿತಾ ಶೆಟ್ಟಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಈ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ವದಂತಿ ಇಷ್ಟು ವೇಗವಾಗಿ ಎಲ್ಲೆಡೆ ಹಬ್ಬಲು ಕಾರಣವೂ ಇದ್ದು, ಈ ಸ್ಟಾರ್ ಜೋಡಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪರಸ್ಪರ ಅನ್ಫಾಲೋ ಮಾಡಿದ್ದಾರೆ. ಇದರ ಜೊತೆಗೆ ಇಬ್ಬರ ಖಾತೆಯಿಂದಲೂ ಇಬ್ಬರು ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಲಾಗಿದೆ.
ಹೀಗಾಗಿ ಈ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ.2019ರಲ್ಲಿ ನಟಿ ಆಶ್ರಿತಾರೊಂದಿಗೆ ವೈವಾಹಿಕ ಜೀವನಕ್ಕೆ ಮನೀಷ್ ಪಾಂಡೆ ಕಾಲಿಟ್ಟಿದ್ದರು. ಐಪಿಎಲ್ ಸಮಯದಲ್ಲಿ ಪತಿಯನ್ನು ಬೆಂಬಲಿಸಲು ಹಲವು ಬಾರಿ ಆಶ್ರಿತಾ ಅವರು ಮೈದಾನಕ್ಕೆ ಬಂದಿದ್ದರು.ಆದರೆ ಐಪಿಎಲ್ 2024 ರ ಸಮಯದಲ್ಲಿ ಅವರು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿರಲಿಲ್ಲ ಇದೀಗ ದಂಪತಿಗಳು ವಿಚ್ಛೇದನ ಪಡೆಯಲು ಮುಂದಾಗಿದ್ದು, ಅಭಿಮಾನಿಗಳಿಗೆ ಈ ವಿಚಾರ ಬೇಸರವನ್ನು ಉಂಟು ಮಾಡಿದೆ.