ಬೆಂಗಳೂರು : ಮಹಿಳಾ ಉದ್ಯೋಗಿಗಳಿಗೆ ಸುರಕ್ಷಿತ ನಗರಗಳ ಸಾಲಿನಲ್ಲಿ ಬೆಂಗಳೂರು ಮೊದಲ ಸ್ಥಾನವನ್ನು ಪಡೆದಕೊಂಡಿದೆ. ಮಹಿಳೆಯರ ಕೌಶಲ್ಯಾಭಿವೃದ್ಧಿ, ಉದ್ಯೋಗಾವಕಾಶ, ಮೂಲಸೌಕರ್ಯ ಕ್ಷೇತ್ರಗಳಲ್ಲಿ ದೇಶದಲ್ಲಿಯೇ ಉತ್ತಮ ವ್ಯವಸ್ಥೆಯನ್ನು ಬೆಂಗಳೂರು ಹೊಂದಿದೆ ಎಂದು ಅವತಾರ್ ಗ್ರೂಪ್ ಸಿದ್ಧಪಡಿಸಿರುವ ವರದಿ ಹೇಳಿದೆ.
ಹೌದು ಅವತಾರ್ ಗ್ರೂಪ್ ತಯಾರಿಸಿರುವ ಟಾಪ್ ಸಿಟೀಸ್ ಫಾರ್ ವುಮೆನ್‌ಇನ್ ಇಂಡಿಯಾದ ಮೂರನೇ ಆವೃತ್ತಿಯಲ್ಲಿ ಬೆಂಗಳೂರಿಗೆ ಅಗ್ರಪಟ್ಟ ದೊರೆತಿದೆ. ಇದರ ನಂತರದಲ್ಲಿ ಚೆನ್ನೈ, ಮುಂಬೈ, ಹೈದರಾಬಾದ್, ಪುಣೆ, ಕೋಲ್ಕತಾ ಮತ್ತು ಅಹಮದಾಬಾದ್ ಸ್ಥಾನ ಪಡೆ ದುಕೊಂಡಿವೆ. ಆದರೆ ಉತ್ತರಭಾರತದ ನಗರಗಳು ಮಹಿಳೆಯರ ಸುರಕ್ಷತೆಯಲ್ಲಿ ಹಿಂದೆ ಉಳಿದಿವೆ ಎಂದು ವರದಿ ಹೇಳಿದೆ.
ಕಳೆದ ವರ್ಷ ಫೆಬ್ರವರಿಯಿಂದ ನವೆಂಬರ್‌ವರೆಗೆ ನಡೆಸಿದ ಅಧ್ಯಯ ನದಲ್ಲಿ ಸಾಮಾಜಿಕ ಸೇರ್ಪಡೆ, ಕೈಗಾರಿಕಾ ಸೇರ್ಪಡೆ ಮತ್ತು ಜನರ ಅನುಭವ ಎಂಬ ಮೂರು ಅಂಶಗಳ ಆಧಾರದ ಮೇಲೆ ಮೌಲ್ಯಮಾಪನ ನಡೆಸಲಾಗಿದೆ. ಇದರಲ್ಲಿ ಬೆಂಗಳೂರು ನಗರವು ಮೂಲ ಭೂತ ಸೌಕರ್ಯ, ಕೌಶಲ್ಯಾಭಿವೃದ್ಧಿ, ಸಾರಿಗೆ ಮತ್ತು ಮಹಿಳಾ ಉದ್ಯೋಗಾ ವಕಾಶಗಳಲ್ಲಿ ಮುಂದಿದೆ. ದಕ್ಷಿಣದ ಬಹುತೇಕ ನಗರಗಳು ಮಹಿಳಾ ಸ್ನೇಹಿ ವಾತಾವರಣ ಹೊಂದಿವೆ. 2023ರಲ್ಲಿ ಚೆನ್ನೈ ಮೊದಲ ಸ್ಥಾನದಲ್ಲಿತ್ತು.