ಬೆಂಗಳೂರು : ಕಳೆದ ವರ್ಷ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಒಂದು ದಾಖಲೆ ನಿರ್ಮಾಣ ಮಾಡಿದ್ದು, ಏನಪ್ಪಾ ಅದು ದಾಖಲೆ ಅಂದರೆ ಕಳೆದ ಒಂದೇ ವರ್ಷದಲ್ಲಿ ಸುಮಾರು 4.07 ಕೋಟಿ ಜನರು ಪ್ರಯಾಣಿಸಿದ್ದಾರೆ ಎನ್ನಲಾಗಿದೆ. 2023ಕ್ಕೆ ಹೋಲಿಸಿದರೆ ಶೇ.9ರಷ್ಟು ಬೆಳವಣಿಗೆಯಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ತಿಳಿಸಿದೆ.
ಹೌದು ದೇಶದ ಮೂರನೇ ದೊಡ್ಡ ವಿಮಾನ ನಿಲ್ದಾಣವಾಗಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದೇ ವರ್ಷದಲ್ಲಿ 4 ಕೋಟಿ ಜನ ಮೈಲುಗಲ್ಲು ಸಾಧಿಸಿದ ಕಾರಣ ಬೆಂಗಳೂರು ವಿಮಾನ ನಿಲ್ದಾಣವು ಅಂ ತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ (ಎಸಿಐ) ಅನ್ವಯ ‘ದೊಡ್ಡ ವಿಮಾನ ನಿಲ್ದಾಣ’ ಸ್ಥಾನವನ್ನು ಪಡೆದುಕೊಂಡಿದೆ.
ಕಳೆದ 2024 ಅಕ್ಟೊಬರ್ 5 ರಂದು ಒಂದೇ ದಿನ 1,26,532 ಜನರು ಪ್ರಯಾಣಿಸಿರುವುದು ಒಂದೇ ದಿನದ ದಾಖಲೆ. ಅ.17ರಂದು ಗರಿಷ್ಠ 782 ವಿಮಾನಗಳು ಸಂಚರಿಸಿವೆ. ಡಿ.31ರವರೆಗೆ ಬೆಂಗಳೂರು 75 ದೇಶೀಯ ಮತ್ತು 30 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಜೊತೆ ನೇರ ಸಂಪರ್ಕ ಹೊಂದಿದೆ ಎಂದು ಬಿಐಎಎಲ್ ತಿಳಿಸಿದೆ.
ಅಷ್ಟೆ ಅಲ್ಲದೇ 2024ರಲ್ಲಿ ನಿಲ್ದಾಣ ಮೂಲಕ 4,96,227 ಮೆಟ್ರಿಕ್ ಟನ್ ಸರಕು ಸಾಗಣೆಯಾಗಿವೆ. ಇದು 2023ಕ್ಕೆ ಹೋಲಿಸಿದರೆ ಶೇ.17ರಷ್ಟು ಏರಿಕೆಯಾಗಿದೆ. ಇನ್ನು ಅಂತಾರಾಷ್ಟ್ರೀಯವಾಗಿ 3,13,981 ಮೆಟ್ರಿಕ್ ಟನ್ ಸರಕು ಸಾಗಣೆಯಾಗಿದ್ದು, ಶೇ.23ರಷ್ಟು ಏರಿಕೆಯಾಗಿದೆ. ದೇಶೀಯವಾಗಿ 1,82,246 ಮೆಟ್ರಿಕ್ ಟನ್ ಸರಕು ಚಲನವಾಗಿದ್ದು, ಶೇ.9ರಷ್ಟು ವೃದ್ಧಿಯಾಗಿದೆ.
ಇನ್ನೊಂದು ಖುಷಿಯ ವಿಚಾರ ಏನೆಂದರೆ, ಬೆಂಗಳೂರು ವಿಮಾನ ನಿಲ್ದಾಣ ಹೊಸ ದೇಶೀಯ ಮತ್ತು ಅಂತಾರಾಷ್ಟ್ರೀಯ ಏರ್ಲೈನ್ಸ್ಗಳು ಆಗಮಿಸಿವೆ. ಓಮಾನ್ನ ಸಲಾಂ ಏರ್, ಮಾಲ್ಮೀಮ್ಸ್ನ ಮಾಂತಾ ಏರ್, ಬ್ರಿಟನ್ನ ವರ್ಜಿನ್ ಅಟ್ಲಾಂಟಿಕ್ ಮತ್ತು ಭಾರತದ ಹೊಸ ಕಂಪನಿ ಪ್ರೈ-91 ಬೆಂಗಳೂರಿನಿಂದ ಕಾರ್ಯಾಚರಣೆ ಆರಂಭಿಸಿವೆ.