ಮಹಾರಾಷ್ಟ್ರ : ಪ್ರೀತಿ ನಿರಾಕರಿಸಿದಳೆಂದು ಸಹೋದ್ಯೋಗಿ ಯುವತಿಯನ್ನೇ ಹಾಡು ಹಗಲೇ ನೂರಾರು ಜನರ ಮುಂದೆ ಯುವಕನೊಬ್ಬ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಯರವಾಡ ಎಂಬಲ್ಲಿ ಒಂದು ಘಟನೆ ನಡೆದಿದೆ.
ಹೌದು ಕೊಲೆಯಾದ ಯುವತಿ ಹಾಗೂ ಪಾಪಿ ಯುವಕ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹುಡುಗನ ಪ್ರೀತಿ ನಿವೇದನೆಯನ್ನು ಹುಡುಗಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇನ್ನೂ ಕೆಲವು ಕಡೆ ಆರ್ಥಿಕ ವಿಚಾರವಾಗಿ ಕೊಲೆ ನಡೆದಿದೆ ಎಂದು ವರದಿಯಾಗಿದೆ.
ಪ್ರೀತಿಸೋದಕ್ಕೆ ನಿರಾಕರಿಸಿದ್ದಕ್ಕೆ ಹಾಡು ಹಗಲಿನಲ್ಲಿ ನೂರಾರು ಜನ ನೋಡುತ್ತಿರುವಂತೆಯೇ ಕಂಪನಿಯ ಪಾರ್ಕಿಂಗ್ ಲಾಟ್‌ನಲ್ಲಿಯೇ ಭೀಕರವಾಗಿ ಕೊಲೆ ಮಾಡಿದ್ದಾನೆ.ಎಷ್ಟೋ ಜನ ಘಟನೆಯನ್ನ ನೋಡುತ್ತಾ ನಿಂತರೆ ಹೊರತು ಯಾರು ಕೂಡ ಕೊಲೆಯನ್ನು ತಡೆಯುವ ಕನಿಷ್ಟ ಪ್ರಯತ್ನ ಕೂಡ ಮಾಡಲಿಲ್ಲ. ಸದ್ಯ ಆರೋಪಿಯನ್ನ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.