ಬೆಂಗಳೂರು : ಚೀನಾದಲ್ಲಿ ಹುಟ್ಟಿಕೊಂಡಂತಹ ಮಾರಕ ಎಚ್ಎಂಪಿವಿ ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಭಾರತದಲ್ಲಿ ಇದುವರೆಗೂ 8 ಪ್ರಕರಣಗಳು ಪತ್ತೆಯಾಗಿದೆ. ಈ ವಿಚಾರವಾಗಿ ರಾಜ್ಯ ಆರೋಗ್ಯ ಇಲಾಖೆಯ ಕೂಡ ಕ್ರಮ ಕೈಗೊಂಡಿದ್ದು ಮುಂಜಾಗ್ರತ ಕ್ರಮವಾಗಿ ಜನರಲಿ ಜಾಗೃತಿ ಮೂಡಿಸುತ್ತಿದ್ದೂ, ಇದೇ ವಿಚಾರವಾಗಿ ಜನರು ಅನಗತ್ಯವಾಗಿ ಟೆಸ್ಟ್ ಮಾಡಿಸಿಕೊಂಡು ದುಂದು ವೆಚ್ಚ ಮಾಡಿಕೊಳ್ಳಬೇಡಿ ಎಂದು ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, HMPV ಟೆಸ್ಟ್ ಮಾಡಿಸಿ ದುಂದು ವೆಚ್ಚ ಮಾಡುವ ಅಗತ್ಯವಿಲ್ಲ. HMP ವೈರಸ್ ಬಗ್ಗೆ ಯಾರೂ ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ. ಈ ಒಂದು ವೈರಸ್ ನಿಂದ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಅಲ್ಲದೆ ಜನರು ಅನಗತ್ಯವಾಗಿ ತಪಾಸಣೆ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಯಾವುದೇ ರೀತಿಯಾಗಿ ಜನರು ಭಯಪಡಬಾರದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.