ತುಮಕೂರು : ತುಮಕೂರಲ್ಲಿ ಡಿನ್ನರ್ ಮೀಟಿಂಗ್ ಕುರಿತು ಸಹಕಾರ ಖಾತೆ ಸಚಿವ ಕೆಎನ್ ರಾಜಣ್ಣ ಹೇಳಿಕೆ ನೀಡಿದ್ದು ಮೊನ್ನೆ ನಡೆದಿರುವಂತಹ ಡಿನ್ನರ್ ಮೀಟಿಂಗ್ ಬಗ್ಗೆ ಗೊಂದಲ ಆಗಿತ್ತು. ಆ ಗೊಂದಲದ ಜೊತೆಗೆ ಇನ್ನೊಂದು ಗೊಂದಲ ಆಗುವುದು ಬೇಡ ಎಂದು ಡಿನ್ನರ್ ಮೀಟಿಂಗ್ ಮುಂದೂಡಲಾಗಿದೆ ಹೊರತು ಕ್ಯಾನ್ಸಲ್ ಆಗಿಲ್ಲ ಎಂದು ಸಚಿವ ಕೆ. ಎನ್ ರಾಜಣ್ಣ ಸ್ಪಷ್ಟನೆ ನೀಡಿದರು.
ಡಿನ್ನರ್ ಮೀಟಿಂಗ್ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಬೇಸರವಾಗಿರುವ ಕುರಿತು, ಡಿಕೆ ಶಿವಕುಮಾರ್ ಬೇಸರಾಗಲು ಅವರ ಆಸ್ತಿನ ಏನಾದರೂ ಬರೆಸಿಕೊಂಡಿದ್ದೀರಾ? ವಿಶ್ವವಿದ್ಯಾಲಯಗಳಲ್ಲಿ ಎಸ್ಸಿ, ಎಸ್ಟಿ ಮಕ್ಕಳಿಗೆ ಸೀಟು ಸಿಗುತ್ತಿಲ್ಲ. ಈ ವಿಚಾರ ಚರ್ಚೆ ಕರೆದರೆ ನೀವು ಮಾಡಬೇಡಿ ಅಂದ್ರೆ ಹೇಗೆ? ಇವೆಲ್ಲವೂ ಬಹಳಷ್ಟು ದಿನ ನಡೆಯಲ್ಲ. ಮುಂದಿನ ಮೀಟಿಂಗ್ಗಾಗಿ ದಿನಕ್ಕೆ ನಿಗದ ಮಾಡಿ ತಿಳಿಸುತ್ತೇವೆ ಎಂದರು.
ಮುಂದಿನ ತಿಂಗಳು 14 ರಂದು ಎಂಎಂ ಹಿಲ್ಸ್ ನಲ್ಲಿ ಸಂಪುಟ ಸಭೆ ನಡೆಯಲಿದೆ.ಚಾಮರಾಜನಗರ ಜಿಲ್ಲೆಗೆ ಹೋದರೆ ಸಿಎಂ ಸ್ಥಾನ ಹೋಗುತ್ತೆ ಅಂತ ಹೇಳುತ್ತಿದ್ದಾರೆ. ಅಷ್ಟರೊಳಗೆ ಸಭೆ ಮಾಡುತ್ತೇವೆ ಇಲ್ಲ ಅಂದರೆ ಕ್ಯಾಬಿನೆಟ್ ಮೆಡಿಕಲ್ ಸಭೆ ಮಾಡುತ್ತೇವೆ.ಆ ಬಗ್ಗೆ ತಿಳಿಸುತ್ತೇವೆ ಕ್ಯಾಬಿನೆಟ್ ವಿಸ್ತರಣೆ ಯಾವುದು ಇಲ್ಲ ಎಂದು ತುಮಕೂರಿನಲ್ಲಿ ಸಹಕಾರ ಖಾತೆಯ ಸಚಿವ ಕೆ.ಎನ್ ತಿಳಿಸಿದರು.