ಬೆಂಗಳೂರು : ತಂದೆಯೊಬ್ಬರು ತಮ್ಮ ಮಗನನ್ನು ಶಾಲೆಗೆ ಬಿಡಲು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ, ಓವರ್ ಟೇಕ್ ಮಾಡುವ ಭರದಲ್ಲಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿ ಕುಳಿತಿದ್ದ ತಮ್ಮ ಮಗನು ರಸ್ತೆಗೆ ಬಿದ್ದಿದ್ದಾನೆ.ತಕ್ಷಣ ವೇಗವಾಗಿ ಬಂದಂತಹ ಟ್ರಾಕ್ಟರ್ ಒಂದು ಆತನ ಮೇಲೆ ಹರಿದ ಪರಿಣಾಮ ಬಾಲಕ ಸಾವನಪ್ಪಿರುವ ಘಟನೆ ಬೆಂಗಳೂರಿನ ಹಗದೂರು ಮುಖ್ಯ ರಸ್ತೆ ವೈಟ್ಫೀಲ್ಡ್ನಲ್ಲಿ ನಡೆದಿದೆ.
ಮೃತ ಬಾಲಕ ಕಾಂಗೇದ್ರ ತಂದೆ ಮಗನನ್ನು ಶಾಲೆಗೆ ಡ್ರಾಪ್ ಮಾಡಲು ಕರೆದೊಯ್ಯುತ್ತಿದ್ದರು. ಈ ವೇಳೆ ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್ರನ್ನು ಓವರ್ ಟೇಕ್ ಮಾಡಲು ಮುಂದಾಗಿದ್ದಾರೆ. ಆದರೆ ಓವರ್ಟೇಕ್ ಮಾಡುವ ವೇಳೆ ಎದುರುಗಡೆಯಿಂದ ಮತ್ತೊಂದು ಬೈಕ್ ಬಂದಿದ್ದು. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ಕೆಳಗೆ ಬಿದ್ದಿದೆ. ಈ ವೇಳೆ ಬಾಲಕ ಕಾಗೇಂದ್ರ ಪಕ್ಕದಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್ ಟ್ಯಾಂಕರ್ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಬಾಲಕನ ಮೇಲೆ ಟ್ಯಾಂಕರ್ ಹರಿದಿದೆ.
ಗಾಯಗೊಂಡಿದ್ದ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ಚಿಕಿತ್ಸೆ ಫಲಿಸದೆ ಬಾಲಕ ಸಾವನ್ನಪ್ಪಿದ್ದಾನೆ. ಘಟನೆಯ ಕುರಿತು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರ ಹಾಕುತ್ತಿದ್ದು, ಟ್ರ್ಯಾಕ್ಟರ್ ಓಡಾಟಕ್ಕೆ ನಿರ್ದಿಷ್ಟವಾದಂತ ಸಮಾಯ ನಿಗದಿ ಮಾಡಿದರೆ ಇಂತಹ ಅಪಘಾತಗಳನ್ನು ತಡೆಯಬಹುದು ಎಂದು ಕಿಡಿ ಕಾರಿದ್ದಾರೆ.