ದಾವಣಗೆರೆ: ಗ್ಯಾಸ್ ಸಿಲಿಂಡರ್ ಲೀಕ್ ನಂತ್ರ ಬೆಂಕಿ ಕಾಣಿಸಿಕೊಂಡು, ಸ್ಪೋಟಗೊಂಡ ಪರಿಣಾಮ ಇಡೀ ಮನೆಯ ಹೊತ್ತಿ ಉರಿದಿರುವ ಘಟನೆ ಚನ್ನಗಿರಿಯಲ್ಲಿ ನಡೆದಿದೆ.
ಚನ್ನಗಿರಿಯ ಚನ್ನೇಶಪುರ ಗ್ರಾಮದಲ್ಲಿ ಸಿಲಿಂಡರ್ ಲೀಕ್ ನಿಂದ ಮನೆಯಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡು ಮನೆಯಲ್ಲಿದ್ದಂತ ರೈತ ಕಾಶಪ್ಪ ಅವರ ಪತ್ನಿ, ಮಗ ಮನೆಯಿಂದ ಹೊರ ಓಡಿ ಬಂದಿದ್ದಾರೆ.
ರೈತ ಕಾಶಪ್ಪ ಪತ್ನಿ, ಪುತ್ರ ಮನೆಯಿಂದ ಹೊರ ಬಂದ ಎರಡೇ ನಿಮಿಷದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದೆ. ಈ ಪರಿಣಾಮ ರೈತ ಕಾಶಪ್ಪ ಅವರ ಮನೆ ಹೊತ್ತಿ ಉರಿದು ಸಂಪೂರ್ಣ ಸುಟ್ಟ ಕರಕಲಾಗಿದೆ.
ಗ್ಯಾಸ್ ಸಿಲಿಂಡರ್ ನಿಂದ ಉಂಟಾದಂತ ಸ್ಪೋಟದ ಬೆಂಕಿಯಲ್ಲಿ ರೈತ ಕಾಶಪ್ಪ ಅವರ ಮನೆಯಲ್ಲಿದ್ದಂತ ವಸ್ತು, ಅಪಾರ ಪ್ರಮಾಣದ ದವಸ ಧಾನ್ಯಗಳು ಬೆಂಕಿಗೆ ಆಹುತಿಯಾಗಿದ್ದಾವೆ.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಚನ್ನಗಿರಿ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂಡಿಸಲು ಹರಸಾಹಸ ಪಡುತ್ತಿದ್ದಾರೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗರ ತಾಲ್ಲೂಕು ಮಟ್ಟದ ‘ಮಕ್ಕಳ ಸಾಹಿತ್ಯ ಸಮ್ಮೇಳ’ದ ಅಧ್ಯಕ್ಷೆಯಾಗಿ ‘ಬಿಂದು’ ಆಯ್ಕೆ
BIG UPDATE : ಕರ್ನಾಟಕದಲ್ಲಿ 2 ‘HMPV’ ಸೋಂಕು ಧೃಡ : ‘ICMR’ ಸ್ಪಷ್ಟನೆ | HMPV VIRUS