ಬೀದರ್ : ಬೀದರ್ ನಲ್ಲಿ ಭೀಕರವಾದಂತಹ ರಸ್ತೆ ಅಪಘಾತ ಸಂಭವಿಸಿದ್ದು, ಸ್ಕಾರ್ಪಿಯೋ ಕಾರು ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದ ದಂಪತಿ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ಯರಭಾಗ ಬಳಿ ಈ ಒಂದು ಭೀಕರವಾದ ಅಪಘಾತ ನಡೆದಿದೆ.
ಮೃತ ದಂಪತಿಯನ್ನು ಪ್ರಕಾಶ್ ಹಾಗೂ ಬಬಿತ ಎಂದು ಗುರುತಿಸಲಾಗಿದೆ. ಅಪಘಾತ ಬಳಿಕ ಪತಿ ಪ್ರಕಾಶ್ ಸ್ಥಳದಲ್ಲೆ ಸವಣ್ಣಪ್ಪಿದರೆ, ಇನ್ನು ಗಾಯಗೊಂಡ ಪತ್ನಿ ಬಬಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರದಿಂದ ಸೋಲಾಪುರದ ಕಡೆಗೆ ಸ್ಕಾರ್ಪಿಯೋ ಕಾರು ತೆರಳುತ್ತಿತ್ತು. ಇತ್ತ ನಾರಾಯಣಪುರದಿಂದ ಬೈಕ್ ನಲ್ಲಿ ಚಿಟುಗುಪ್ಪ ಕಡೆಗೆ ದಂಪತಿ ಹೊರಟಿದ್ದ ವೇಳೆ ಅಪಘಾತವಾಗಿದೆ.ಅಪಘಾತದ ಕುರಿತು ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.