ಬೆಂಗಳೂರು: ಸಾರಿಗೆ ನೌಕರರು ಕರೆ ನೀಡಿದ್ದ ಡಿ.31ರ ಮುಷ್ಕರವನ್ನು ಕೈಬಿಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದ್ದು ಸಂಕ್ರಾಂತಿಯ ಬಳಿಕ ಸಭೆ ನಡೆಸಿ ಬೇಡಿಕೆಗಳ ಪರಿಶೀಲನೆ ಮಾಡುವ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಸಂಘಟನೆಗಳು ಮುಷ್ಕರವನ್ನು ಮುಂದೂಡಿವೆ.
ಸಾರಿಗೆ ಮುಷ್ಕರವನ್ನು ಜಂಟಿ ಕ್ರಿಯಾ ಸಮಿತಿ ಹಿಂಪಡೆದಿದ್ದು,. ಡಿಸೆಂಬರ್.31ರಂದು ನಡೆಸಲು ನಿರ್ಧರಿಸಿದ್ದಂತ ಪ್ರತಿಭಟನೆಯನ್ನು ವಾಪಾಸ್ ಪಡೆಯಲಾಗಿದೆ. ಹೀಗಾಗಿ ಮಂಗಳವಾರದಂದು ಎಂದಿನಂತೆ ಸಾರಿಗೆ ಬಸ್ಸುಗಳು ರಾಜ್ಯಾಧ್ಯಂತ ಸಂಚಾರ ನಡೆಸಲಿದ್ದಾವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಾರಿಗೆ ಜಂಟಿ ಕ್ರಿಯಾ ಸಮಿತಿಯೊಂದಿಗೆ ಮಹತ್ವದ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಸಾರಿಗೆ ಸಿಬ್ಬಂದಿಗಳ ಬೇಡಿಕೆ ಈಡೇರಿಸುವಂತ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಸರ್ಕಾರ ಹಾಗೂ ಸಾರಿಗೆ ಸಿಬ್ಬಂದಿಗಳ ಜೊತೆಗಿನ ಸಂಧಾನ ಸಕ್ಸಸ್ ಆಗಿದ್ದು, ಡಿಸೆಂಬರ್.31ರಂದು ನಡೆಸಲು ನಿರ್ಧರಿಸಿದ್ದಂತ ಮುಷ್ಕರವನ್ನು ಹಿಂಪಡೆದಿರುವುದಾಗಿ ತಿಳಿದು ಬಂದಿದೆ. ಸಂಕ್ರಾಂತಿ ಬಳಿಕ ಮುಷ್ಕರ ನಡೆಸೋ ಬಗ್ಗೆ ನಿರ್ಧಾರವನ್ನು ಕೈಗೊಳ್ಳೋದಾಗಿ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ ಎನ್ನಲಾಗಿದೆ.