ಉಡುಪಿ : ಯಾವುದೇ ವ್ಯಕ್ತಿಯ ಬದುಕಲ್ಲೂ ಕನಸುಗಳು ಇರುತ್ತವೆ. ಆದರೆ ಅದನ್ನು ನಿಜ ಮಾಡಿಕೊಳ್ಳಲು ನಾನಾ ಸವಾಲು- ಅಡೆತಡೆಗಳು ಹೆಜ್ಜೆಹೆಜ್ಜೆಗೂ ಸಿಗುತ್ತವೆ. ಅಂಥದ್ದರಲ್ಲಿ ತಂತ್ರಜ್ಞಾನದ ಸಹಾಯದಿಂದ ದೊಡ್ಡ ಮಟ್ಟದಲ್ಲಿ ಸಹಾಯ ಆಗುವಂಥ ಕನಸುಗಳಿಗೆ ರೆಕ್ಕೆ ಕಟ್ಟುವ ಉದ್ದೇಶದಿಂದ ರಿಲಯನ್ಸ್ ಡಿಜಿಟಲ್ ನಿಂದ “ಹ್ಯಾಪಿನೆಸ್ ಪ್ರಾಜೆಕ್ಟ್” ಶುರು ಮಾಡಲಾಗಿದೆ. ಅದರ ಭಾಗವಾಗಿ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿರುವ ಅಜ್ಜ- ಅಜ್ಜಿ ಊಟ ಎಂಬ ಹೆಸರಿನ ಮೆಸ್ ಗೆ ಟೆಕ್ನಾಲಜಿಯ ನೆರವನ್ನು ನೀಡಲಾಗಿದೆ. ಇದಕ್ಕಾಗಿ ಕಾರ್ಯಕ್ರಮದ ಮುಖ್ಯ ನಿರೂಪಕಿ ಫರಾಹ್ ಖಾನ್ ಹಾಗೂ ಸಹ ನಿರೂಪಕರಾದ ಸಂಜೋತ್ ಕೀರ್ ಕರ್ನಾಟಕದಲ್ಲಿನ ಮಣಿಪಾಲಕ್ಕೆ ಬಂದು ಈ ಅಜ್ಜ- ಅಜ್ಜಿ ಊಟದ ಮೆಸ್ ಗೆ ಅಗತ್ಯ ಇರುವಂಥದ್ದನ್ನು ತಲುಪಿಸಿದ್ದಾರೆ. ಗೋಪಾಲಕೃಷ್ಣ ಪ್ರಭು ಹಾಗೂ ವಸಂತಿಪ್ರಭು ಅವರು ಮಣಿಪಾಲದಲ್ಲಿ ಮೆಸ್ ನಡೆಸುತ್ತಾರೆ. ಇಲ್ಲಿ ಸಿಗುವ ಅನ್ ಲಿಮಿಟೆಡ್ ಬಾಳೆ ಎಲೆ ಊಟಕ್ಕೆ ಅವರು ಪಡೆಯುವುದು ಅರವತ್ತು ರೂಪಾಯಿ ಮಾತ್ರ.
ಈ ದಂಪತಿಗೆ ಬಹಳ ವಯಸ್ಸಾಗಿದೆ. ಅದರಲ್ಲಿ ಗೋಪಾಲಕೃಷ್ಣ ಅವರಿಗೆ ನಡು ಬಗ್ಗಿದೆ. ಆದರೂ ಇವರಿಬ್ಬರ ಉತ್ಸಾಹ, ದುಡಿಮೆಯ ಪ್ರೀತಿ ಹಾಗೂ ಇಲ್ಲಿಗೆ ಬರುವವರಿಗೆ ಊಟ ಉಣಬಡಿಸುವುದರಲ್ಲಿನ ಅಕ್ಕರಾಸ್ಥೆ ಕಣ್ಣಲ್ಲಿ ನೀರು ಬರುವಂತೆ ಮಾಡುತ್ತದೆ. ಈ ದಂಪತಿ ಪ್ರತಿ ದಿನ ತರಕಾರಿಗಳು ತರುವುದಕ್ಕೆ ಅಂತಲೇ ಆಟೋದಲ್ಲಿ ಕೆಲವು ಕಿಲೋಮೀಟರ್ ಹೋಗಿಬರಬೇಕಿತ್ತು. ಅದೇ ರೀತಿ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದರು. ಅದರ ಹೊಗೆಯಿಂದಲೂ ಕಣ್ಣಿನ ಉರಿ ಮೊದಲಾದ ಸಮಸ್ಯೆಗಳು ಇದ್ದವು. ಇದೀಗ ರಿಲಯನ್ಸ್ ಡಿಜಿಟಲ್ ನವರ “ಹ್ಯಾಪಿನೆಸ್ ಪ್ರಾಜೆಕ್ಟ್” ಅಡಿಯಲ್ಲಿ ಅಜ್ಜ- ಅಜ್ಜಿ ಮೆಸ್ ಗೆ ನಾಲ್ಕು ಬರ್ನರ್ ಇರುವ ಗ್ಯಾಸ್ ಸ್ಟೌ, ರೆಫ್ರಿಜರೇಟರ್, ಅನ್ನದ ಕುಕ್ಕರ್, ಮಿಕ್ಸರ್ ಗ್ರೈಂಡರ್, ಮೈಕ್ರೋವೇವ್ ಹಾಗೂ ಸ್ಮಾರ್ಟ್ ಫೋನ್ ಗಳನ್ನು ಸಹ ಉಚಿತವಾಗಿ ನೀಡಲಾಗಿದೆ.
ಇವೆಲ್ಲವನ್ನೂ ನೋಡುವಾಗ ವಸಂತಿ ಪ್ರಭು ಅವರ ಕಣ್ಣಲ್ಲಿ ಸಂತೋಷದ ಕಣ್ಣೀರು. ಇನ್ನು ಮುಂದೆ ನಾಲ್ಕೈದು ದಿನಕ್ಕೆ ಆಗುವಷ್ಟು ತರಕಾರಿ ಒಮ್ಮೆಲೆ ತಂದುಕೊಂಡು ಬಿಡುತ್ತೇವೆ ಅನ್ನುವಾಗ ಗೋಪಾಲಕೃಷ್ಣ ಪ್ರಭು ಅವರ ಮುಖದಲ್ಲಿ ಮಿಂಚು ತರಿಸುವಷ್ಟು ಸಂಭ್ರಮ. ಬಿಸಿ ಬಿಸಿ ಊಟ ಮಾಡಬಹುದು ಮೈಕ್ರೋವೇವ್ ಓವನ್, ರೈಸ್ ಕುಕ್ಕರ್, ಸ್ಟೌ, ಗ್ರೈಂಡರ್ ಇವೆಲ್ಲದರಿಂದ ಬಹಳ ಅನುಕೂಲವಾಯಿತು ಅನ್ನುತ್ತಾ ಈ ದಂಪತಿ ತಮ್ಮ ಖುಷಿ ಹೇಳಿಕೊಂಡರು. “ನೀವು ಇಷ್ಟೆಲ್ಲ ತಂದುಕೊಡ್ತೀರಿ ಅಂತ ಅಂದುಕೊಂಡೇ ಇರಲಿಲ್ಲ. ತುಂಬ ದೊಡ್ಡ ಫ್ರಿಜ್ ಇದು,” ಎಂದು ತಮ್ಮ ಖುಷಿ ಹೇಳಿಕೊಂಡರು ಈ ವೃದ್ಧ ದಂಪತಿ.
ಹ್ಯಾಪಿನೆಸ್ ಪ್ರಾಜೆಕ್ಟ್ ಇರುವುದೇ ಈ ಬದಲಾವಣೆ ತರುವುದಕ್ಕೆ. ಲಾಭದ ಅಪೇಕ್ಷೆಯೇ ಇಲ್ಲದೆ, ಬರುವ ಜನರಿಗೆ ತಮ್ಮದೇ ಮಕ್ಕಳು- ಮೊಮ್ಮಕ್ಕಳಿಗೆ ಊಟ ಬಡಿಸುತ್ತಿದ್ದೇವೆ ಎಂಬ ಪ್ರೀತಿಯಿಂದ ಗೋಪಾಲಕೃಷ್ಣ ಪ್ರಭು ಹಾಗೂ ವಸಂತಿಪ್ರಭು ಊಟಕ್ಕೆ ಹಾಕುತ್ತಾರೆ. ಅವರ ಅಗತ್ಯಗಳು ಏನಿದ್ದವು ಇದೀಗ ರಿಲಯನ್ಸ್ ಡಿಜಿಟಲ್ ನಿಂದ ಪೂರ್ತಿ ಆಗಿದೆ.
ಅಜ್ಜ- ಅಜ್ಜಿಯ ಉತ್ಸಾಹದ ಬದುಕಿನ ವೀಡಿಯೋ ಈ ಕೆಳಗಿದೆ ನೋಡಿ..
ತಾವು ಬಯಸುವಂಥ ಕೆಲಸ, ಹುಚ್ಚಿನಂತೆ ಪ್ರೀತಿಸುವ ವೃತ್ತಿ, ಪ್ರಾಜೆಕ್ಟ್ ಮಾಡುವುದಕ್ಕೆ ತಂತ್ರಜ್ಞಾನದ ಅಡಚಣೆ ಎದುರಾಗಿರುವುದಾದರೆ ಅಂಥವರ ಜೊತೆಗೆ ರಿಲಯನ್ಸ್ ಡಿಜಿಟಲ್ ನಿಲ್ಲಲಿದೆ. ಹೆಸರಾಂತ ಸೆಲೆಬ್ರಿಟಿ ಫರಾಹ್ ಖಾನ್ ನಿರೂಪಣೆ ಮಾಡಲಿದ್ದಾರೆ. ಇತರ ಆರು ಚುರುಕಾದ ಮನಸ್ಸುಗಳು ಅವರ ಜೊತೆಗೂಡಿ ಸಹ ನಿರೂಪಣೆ ಮಾಡಲಿದ್ದಾರೆ. ಈ ಅದ್ಭುತವಾದ ತಂಡವು ವ್ಯಕ್ತಿಗಳು ಎದುರಿಸುತ್ತಿರುವ ಸವಾಲುಗಳು ಗುರುತಿಸುತ್ತದೆ ಹಾಗೂ ಅಗತ್ಯ ಇರುವ ತಂತ್ರಜ್ಞಾನಗಳನ್ನು ರಿಲಯನ್ಸ್ ಡಿಜಿಟಲ್ ನಿಂದ ಒದಗಿಸಲಾಗುತ್ತದೆ. ಇನ್ನೂ ಮುಂದುವರಿದು ರಿಲಯನ್ಸ್ ಡಿಜಿಟಲ್ಸ್ ನ ನುರಿತ ಸಿಬ್ಬಂದಿ ಬೆಂಬಲ ನೀಡುತ್ತಾರೆ, ಅವರನ್ನು “ಟೆಕ್ ದೋಸ್ತ್” ಎನ್ನಲಾಗುತ್ತದೆ.
ಈ ಕಾರ್ಯಕ್ರಮವು ಕೋಲ್ಕತ್ತಾದ ಶೋಶೋಬ್ ಎಂಬ ಎನ್ ಜಿಒ ಜೊತೆಗೆ ಪ್ರಾರಂಭವಾಯಿತು. ಇದು ಅಶಕ್ತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಲು ಮೀಸಲಾಗಿದೆ. ತಮ್ಮ ಶಾಲೆಯಲ್ಲಿನ ಉಜ್ವಲ ಮನಸ್ಸಿನವರಿಗೆ ಕಲಿಕೆಯ ಅನುಭವವನ್ನು ಹೆಚ್ಚಿಸಲು ರಿಲಯನ್ಸ್ ಡಿಜಿಟಲ್ ನಿಂದ ಅವರಿಗೆ ತಾಂತ್ರಿಕ ಬೆಂಬಲವನ್ನು ಒದಗಿಸಿದೆ. ಆ ಸ್ಥಳಕ್ಕೆ ಅಗತ್ಯವಾದ ಪರಿಕರಗಳನ್ನು ಒದಗಿಸಿದ್ದು, ಶೋಶೋಬ್ ಈಗ ಉಜ್ವಲ ಭವಿಷ್ಯವನ್ನು ರೂಪಿಸುವ ದಾರಿಯಲ್ಲಿದೆ.
ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ರಿಲಯನ್ಸ್ ಡಿಜಿಟಲ್‌ನ ವಕ್ತಾರರು, “ತಂತ್ರಜ್ಞಾನ ಎಂಬುದು ಇವತ್ತಿಗೆ ಜಗತ್ತಿನಲ್ಲಿ ಆಟವನ್ನೇ ಬದಲಿಸುವಂಥದ್ದಾಗಿದೆ. ರಿಲಯನ್ಸ್ ಡಿಜಿಟಲ್‌ನಲ್ಲಿ, ನಾವು ತಂತ್ರಜ್ಞಾನದ ಶಕ್ತಿಯನ್ನು ಗುರುತಿಸುತ್ತೇವೆ ಮತ್ತು ನಮ್ಮ ವಿಶಿಷ್ಟವಾಗಿ ವೈಯಕ್ತಿಕ ಸವಾಲುಗಳನ್ನು ಎದುರಿಸುವುದಕ್ಕೆ ಸೂಕ್ತವಾದ ಪರಿಹಾರಗಳನ್ನು ನೀಡುವ ಮೂಲಕ ಅದನ್ನು ವೈಯಕ್ತಿಕ ಮಟ್ಟದಲ್ಲಿ ನಂಬುತ್ತೇವೆ. ತಂತ್ರಜ್ಞಾನದ ಸಬಲೀಕರಣ ಧ್ಯೇಯದೊಂದಿಗೆ ಹ್ಯಾಪಿನೆಸ್ ಪ್ರಾಜೆಕ್ಟ್ ಬರುತ್ತಿದ್ದು, ಭಾರತವು ಹೊಸ ಮತ್ತು ಉಜ್ವಲವಾದ ನಾಳೆಗೆ ಜಿಗಿಯುತ್ತಿರುವಾಗ ನಮ್ಮ ಬ್ರ್ಯಾಂಡ್‌ಗೆ ಸಂಪೂರ್ಣವಾಗಿ ತಾಳೆಯಾಗುತ್ತದೆ,” ಎಂದು ಹೇಳಿದ್ದಾರೆ.
ಈ ಪ್ರಾಜೆಕ್ಟ್ ಕರ್ನಾಟಕದ ಮಣಿಪಾಲ್, ಉತ್ತರಪ್ರದೇಶದ ಲಖನೌ, ತಮಿಳುನಾಡಿನ ಚೆನ್ನೈ ಮತ್ತು ಮುಂಬೈಗೆ ಬಂದಿದೆ, ಬರುತ್ತಿದೆ. ತಂತ್ರಜ್ಞಾನ ಎಂಬ ಜಾದೂವಿನ ಮೂಲಕ ಹಲವು ಬದುಕುಗಳಿಗೆ ತಲುಪುತ್ತದೆ. ಈ ಹ್ಯಾಪಿನೆಸ್ ಪ್ರಾಜೆಕ್ಟ್ ಸಂಚಿಕೆಗಳು ರಿಲಯನ್ಸ್ ಡಿಜಿಟಲ್ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರತಿ ಮಧ್ಯಾಹ್ನ ಒಂದು ಗಂಟೆಗೆ ಪ್ರಸಾರ ಆಗಲಿದೆ.
ಈ ಸರಣಿಯನ್ನು ಅನುಸರಿಸುವುದಕ್ಕೆ https://www.youtube.com/playlist?list=PLmeuAfeH-RkfAnI1xWqPedcDAzZ0YiGdi ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ www.reliancedigital.in.
BIG NEWS: ‘ನಟ ದರ್ಶನ್’ಗೆ ಬೆನ್ನು ಮೂಳೆ ಜರುಗಿದೆ: ಆಸ್ಪತ್ರೆಯ ವೈದ್ಯರ ಮೂಲಗಳ ಮಾಹಿತಿ | Actor Darshan