ಕಲಬುರಗಿ : ಯಾವ ಕಾಂಗ್ರೆಸ್ ಪಕ್ಷ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ನಿರಂತರವಾಗಿ ಅಗೌರವ, ಅವಮಾನ ಮಾಡಿದೆಯೋ ಅದೇ ಕಾಂಗ್ರೆಸ್ ಪಕ್ಷ ಈಗ ಅವರ ಹೆಸರಿನ ಮೇಲೆ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಯಾವಾಗಲೂ ಅಂಬೇಡ್ಕರ್ ವಿರೋಧಿಯಾಗಿತ್ತು ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಕಾಂಗ್ರೆಸ್ ಪಕ್ಷದ ವಿರುದ್ದ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಮಂತ್ರಿಮಂಡಲಕ್ಕೆ ರಾಜೀನಾಮೆ ನೀಡಿದಾಗ ಅವರಿಗೆ ಸದನದಲ್ಲಿ ಮಾತನಾಡುವ ಅವಕಾಶ ನೀಡಲಾಗುತ್ತದೆ. ಆದರೆ, ಡಾ. ಬಿ.ಆರ್. ಅಂಬೇಡ್ಕರ್ ಅವರು ರಾಜೀನಾಮೆ ನೀಡಿದಾಗ ಅವರಿಗೆ ಸದನವನ್ನುದ್ದೇಶಿಸಿ ಮಾತನಾಡಲು ಅವಕಾಶ ನೀಡಲಿಲ್ಲ. ತಮ್ಮ ರಾಜೀನಾಮೆ ಪತ್ರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಧಾನಿ ಜವಾಹರಲಾಲ್ ನೆಹರು ಅವರ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. “ಭಾರತದಲ್ಲಿನ ಪರಿಶಿಷ್ಟ ಜಾತಿಯ ಜನರ ಹೀನ ಪರಿಸ್ಥಿತಿಗೆ ಸಮಾನಾಂತರವಾದ ಹೀನ ಪರಿಸ್ಥಿತಿ ಈ ದೇಶದಲ್ಲಿ ಬೇರೆ ಯಾವ ಜನರದ್ದು ಬೇರೆ ಯಾವ ಜನರದ್ದು ಇರಲು ಸಾಧ್ಯವಿಲ್ಲ. ಇಷ್ಟಾದರೂ ಕೂಡ ಪರಿಶಿಷ್ಟ ಜಾತಿಯವರಿಗೆ ಏಕೆ ಪರಿಹಾರ ನೀಡಲಾಗುತ್ತಿಲ್ಲ?.
ಈ ಸರ್ಕಾರ ಮುಸ್ಲಿಮರನ್ನು ರಕ್ಷಿಸುವುದರಲ್ಲಿ ತೋರುತ್ತಿರುವ ಕಾಳಜಿಯನ್ನು ಒಮ್ಮೆ ನೋಡಿ. ಮುಸ್ಲಿಮರನ್ನು ರಕ್ಷಿಸುವುದರಲ್ಲಿ ಪ್ರಧಾನಿಯವರು ವಿಪರೀತ ಕಾಳಜಿ ತೋರುತ್ತಿದ್ದಾರೆ. ಹೌದು, ಈ ದೇಶದ ಮುಸ್ಲಿಮರಿಗೆ ಸರಿಯಾದ ರಕ್ಷಣೆ ನೀಡಲೇಬೇಕು. ಆದರೆ, ಭಾರತದಲ್ಲಿ ಮುಸ್ಲಿಂಮರು ಮಾತ್ರ ರಕ್ಷಣೆಗೆ ಅರ್ಹರಾಗಿರುವವರೇ?” ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಬಾಬಾಸಾಹೇಬರು ಬರೆಯುತ್ತಾರೆ.
ಇದೇ ಕಾರಣದಿಂದ ಕಾಂಗ್ರೆಸ್ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪತ್ರವನ್ನು ಸಾರ್ವಜನಿಕರಿಂದ ಮರೆಮಾಚಿಸಿದೆ. ಯಾಕೆ ಆ ಪತ್ರವನ್ನು ಬಹಿರಂಗಗೊಳಿಸಲಿಲ್ಲ ಎನ್ನುವ ಪ್ರಶ್ನೆಗೆ ಕಾಂಗ್ರೆಸ್ ದೇಶದ ಜನತೆಗೆ ಉತ್ತರಿಸಬೇಕಾಗಿದೆ.
ಇದಕ್ಕಾಗಿಯೇ ಕಾಂಗ್ರೆಸ್ ಎಂದಿಗೂ ಬಾಬಾಸಾಹೇಬರ ರಾಜೀನಾಮೆ ಪತ್ರವನ್ನು ಬಹಿರಂಗಗೊಳಿಸಲಿಲ್ಲ. ಒಂದು ವೇಳೆ ಪತ್ರ ಬಹಿರಂಗವಾಗಿದಿದ್ದರೆ ಪಂಡಿತ ಜವಾಹರ್ ಲಾಲ್ ನೆಹರು ಅವರ ವರ್ಚಸ್ಸಿಗೆ ಅತಿದೊಡ್ಡ ಕಳಂಕ ಮೆತ್ತುತ್ತಿತ್ತು ಎಂಬ ಭಯ ಕಾಂಗ್ರೆಸ್ ಗೆ ಕಾಡಿದೆ.
ಕಾಂಗ್ರೆಸ್ ಪಕ್ಷವು ಎಂದಿಗೂ ಬಾಬಾಸಾಹೇಬರಿಗೆ ಭಾರತ ರತ್ನ, ಪದ್ಮಭೂಷಣ ಅಥವಾ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಿಲ್ಲ. ಆದರೆ, ಬಾಬಾ ಸಾಹೇಬರನ್ನು ಚುನಾವಣೆಯಲ್ಲಿ ಸೋಲಿಸಿದ ನಾರಾಯಣ್ ಸಾಧುಬಾ ಕಚೋಳಕರ್ ಅವರಿಗೆ 1970ರಲ್ಲಿ ಪದ್ಮಭೂಷಣ ನೀಡಿ ಗೌರವಿಸಿತ್ತು. ಕಜ್ಯೋಳಕರ್ ಅವರ ಚುನಾವಣೆಯಲ್ಲಿ ಪಂಡಿತ್ ನೆಹರೂ ಅವರು ಬಹಳ ಮುತುವರ್ಜಿಯಿಂದ ಪ್ರಚಾರ ಮಾಡಿದರು. ಇದು ಕಾಂಗ್ರೆಸ್ ಪಕ್ಷದ ಹಾಗೂ ನೆಹರೂ ಅವರಿಗೆ ಬಾಬಾ ಸಾಹೇಬರ ಬಗ್ಗೆ ಇದ್ದ ಅಸಹನೆಯನ್ನು ಎತ್ತಿ ತೋರಿಸುತ್ತದೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಚಿವ ಸಂಪುಟದಲ್ಲಿ ಇನ್ನು ಮುಂದೆ ಇರುವುದಿಲ್ಲ ಎಂದು ತಮ್ಮ ಖುಷಿಯನ್ನು ವ್ಯಕ್ತಪಡಿಸುತ್ತಾ ಪಂಡಿತ್ ಜವಾಹರಲಾಲ್ ನೆಹರು ಅವರು ಎಡ್ರಿನಾ ಮೌಂಟ್ ಬ್ಯಾಟನ್ಗೆ ಪತ್ರ ಬರೆದಿದ್ದಾರೆ. ಇಂತ ಹೀನ ಮನಸ್ಥಿತಿಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಇಂದು ಅಂಬೇಡ್ಕರ್ ಅವರಿಗೆ ಗೌರವ ನೀಡುವ ಪಕ್ಷ ಎಂದು ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುತ್ತಿರುವ ನಡೆ ನಾಚಿಕೆಗೇಡಿನ ಸಂಗತಿಯಾಗಿದೆ. ಇಂತಹ ಸ್ವಾರ್ಥವನ್ನ ಕಾಂಗ್ರೆಸ್ ಬಿಡಬೇಕಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸುದೀರ್ಘ ಭಾಷಣದ ಒಂದು ಸಣ್ಣ ತುಣುಕನ್ನು ತಿರುಚಿ ಅಪಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ. ಆದರೆ, ದೇಶದ ಜನತೆ ಕಾಂಗ್ರೆಸ್ನ ಈ ಷಡ್ಯಂತ್ರವನ್ನು ಅರಿತುಕೊಳ್ಳುವಷ್ಟು ಬುದ್ಧಿವಂತರಿದ್ದಾರೆ ಹಾಗೂ ಈ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ.
ಬಾಬಾಸಾಹೇಬರು ದೇಶದ ಆರ್ಟಿಕಲ್ 370 ಹಾಗೂ ಪೂರ್ವ ಬಂಗಾಳದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯವನ್ನು ವಿರೋಧಿಸಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ನ ಪಕ್ಷದಗಳ ನಡುವಿನ ಸೈದ್ದಾಂತಿಕ ವ್ಯತ್ಯಾಸವನ್ನು ಅರಿಯಬೇಕಾದ ಅವಶ್ಯಕತೆ ಇದೆ. ಭಾರತೀಯ ಜನತಾ ಪಾರ್ಟಿ ದೇಶದ ಪ್ರಗತಿಗಾಗಿ ಶ್ರಮಿಸಿದರೆ ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ಪಕ್ಷವಾಗಿದೆ. • ಭಾರತೀಯ ಜನತಾ ಪಾರ್ಟಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಜೊತೆಜೊತೆಗೆ ಸೈದ್ದಾಂತಿಕ ವಿರೋಧಿಗಳನ್ನು ಕೂಡ ಗೌರವಿಸುವ ಸಂಸ್ಕೃತಿಯನ್ನು ಹೊಂದಿದೆ.
ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಪಕ್ಷವಾಗಿದೆ. ಬಾಬಾ ಸಾಹೇಬರನ್ನು ಅಗೌರವಿಸುವ ಕಾಂಗ್ರೆಸ್ ಪಕ್ಷದ ಪರಂಪರೆಯನ್ನು ರಾಹುಲ್ ಗಾಂಧಿ ಮುಂದುವರೆಸುತ್ತಿದ್ದಾರೆ. ಇಂತಹ ನಾಟಕಗಳಿಗೆ ರಾಹುಲ್ ಗಾಂಧಿ ಅಂತ್ಯ ಹಾಡಬೇಕು ಎಂದು ತೇಲ್ಕೂರ ತಿಳಿಸಿದ್ದರು.
BIG NEWS: ‘ನಟ ದರ್ಶನ್’ಗೆ ಬೆನ್ನು ಮೂಳೆ ಜರುಗಿದೆ: ಆಸ್ಪತ್ರೆಯ ವೈದ್ಯರ ಮೂಲಗಳ ಮಾಹಿತಿ | Actor Darshan
ಮಣಿಪಾಲದ ‘ಅಜ್ಜ- ಅಜ್ಜಿ ಮೆಸ್’ಗೆ ಈ ಎಲ್ಲವನ್ನು ಉಚಿತವಾಗಿ ನೀಡಿದ ‘ರಿಲಯನ್ಸ್ ಡಿಜಿಟಲ್’