ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಸೋಮವಾರ ವಾಷಿಂಗ್ಟನ್ ಏರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
“ಅಧ್ಯಕ್ಷ ಕ್ಲಿಂಟನ್ ಜ್ವರವನ್ನು ಅಭಿವೃದ್ಧಿಪಡಿಸಿದ ನಂತರ ಪರೀಕ್ಷೆ ಮತ್ತು ವೀಕ್ಷಣೆಗಾಗಿ ಇಂದು ಮಧ್ಯಾಹ್ನ ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರಕ್ಕೆ ಸೇರಿಸಲಾಯಿತು” ಎಂದು ಕ್ಲಿಂಟನ್‌ರ ಉಪ ಮುಖ್ಯಸ್ಥ ಏಂಜೆಲ್ ಯುರೇನಾ ತಿಳಿಸಿದ್ದಾರೆ.
78 ವರ್ಷದ ಕ್ಲಿಂಟನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ವಾಷಿಂಗ್ಟನ್‌ನ ಮನೆಯಲ್ಲಿದ್ದರು. 2021 ರಲ್ಲಿ ಕೋವಿಡ್ ಅಲ್ಲದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಹೃದಯ ಸಂಬಂಧಿ ಸಮಸ್ಯೆಯನ್ನೂ ಹೊಂದಿದ್ದಾರೆ ಎಂದು ಏಂಜೆಲ್ ಯುರೇನಾ ಮಾಹಿತಿ ನೀಡಿದ್ದಾರೆ.
President Clinton was admitted to MedStar Georgetown University Hospital this afternoon for testing and observation after developing a fever. He remains in good spirits and deeply appreciates the excellent care he is receiving.
— Angel Ureña (@angelurena) December 23, 2024