Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಮತದಾನದ ದಿನದಂದು ಎಲ್ಲಾ ಉದ್ಯೋಗಿಗಳಿಗೆ ವೇತನ ಸಹಿತ ರಜೆ ಘೋಷಿಸಿದ ಚುನಾವಣಾ ಆಯೋಗ

03/04/2026 1:45 PM

ಪೆಟ್ರೋಲ್ ಬಂಕ್‌ಗಳಲ್ಲಿ ಮೊಬೈಲ್ ಬಳಕೆ ನಿಷೇಧವೇಕೆ? ಇಲ್ಲಿದೆ ಅಸಲಿ ಕಾರಣ!

03/04/2026 1:44 PM

ಮಗನನ್ನ ರಾಜಕೀಯಕ್ಕೆ ತಂದು ವಸೂಲಿ ಮಾಡುತ್ತಿರುವ ಸಿಎಂಗೆ, ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ : HDK

03/04/2026 1:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯ ‘ಸರ್ಕಾರಿ ನೌಕರರ ವರ್ಗಾವಣೆ’ಗೆ ಸಿಎಂ ಸಿದ್ಧರಾಮಯ್ಯ ಬ್ರೇಕ್: ಅನುಮತಿ ಕಡ್ಡಾಯಗೊಳಿಸಿ ಅಧಿಕೃತ ಆದೇಶ
KARNATAKA

BIG NEWS: ರಾಜ್ಯ ‘ಸರ್ಕಾರಿ ನೌಕರರ ವರ್ಗಾವಣೆ’ಗೆ ಸಿಎಂ ಸಿದ್ಧರಾಮಯ್ಯ ಬ್ರೇಕ್: ಅನುಮತಿ ಕಡ್ಡಾಯಗೊಳಿಸಿ ಅಧಿಕೃತ ಆದೇಶ

By kannadanewsnow0923/12/2024 7:37 PM

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಅನಗತ್ಯ ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಬ್ರೇಕ್ ಹಾಕಿದ್ದಾರೆ. ತಮ್ಮ ಅನುಮತಿಯಿಲ್ಲದೇ ಯಾವುದೇ ಇಲಾಖೆಯ ನೌಕರರನ್ನು ವರ್ಗಾವಣೆಗೊಳಿಸದಂತೆ ಅಧಿಕೃತವಾಗಿ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ವಿಶೇಷ ರಾಜ್ಯಪತ್ರವನ್ನು ಹೊರಡಿಸಿದ್ದಾರೆ. ಅದರಲ್ಲಿ 1.ದಿನಾಂಕ: 25.06.2024ರ ಸರ್ಕಾರಿ ಆದೇಶದಲ್ಲಿ ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ. ಸದರಿ ಆದೇಶದ ಕಂಡಿಕೆ 5ರಲ್ಲಿ ಸಾರ್ವತ್ರಿಕ ವರ್ಗಾವಣೆ ಅವಧಿಯ ನಂತರದಲ್ಲಿ ಮಾಡುವ ವರ್ಗಾವಣೆಗಳ ಬಗ್ಗೆ ಸ್ಪಷ್ಟಪಡಿಸಲಾಗಿದ್ದು, ಸದರಿ ಕಂಡಿಕೆಯ ಉಪ ಕಂಡಿಕೆ (3) ರಲ್ಲಿ ಈ ಕೆಳಗಿನಂತೆ ತಿಳಿಸಲಾಗಿರುತ್ತದೆ ಎಂದಿದ್ದಾರೆ.

5(3), ವಿಶೇಷವಾದ ಅಥವಾ ಅಪವಾದಾತ್ಮಕ ಕಾರಣಗಳ ಮೇರೆಗೆ ಮಾಡುವ ವಾರ್ಷಿಕ ವರ್ಗಾವಣೆಗಳ ಸಂಖ್ಯೆಯನ್ನು ಕನಿಷ್ಠ ಮಟ್ಟಕ್ಕೆ ಸೀಮಿತಗೊಳಿಸಿ ನಿರ್ದಿಷ್ಟ ಪ್ರಕರಣದಲ್ಲಿ ವರ್ಗಾವಣೆ ಅವಶ್ಯಕವೆನಿಸಿದಲ್ಲಿ ಇಂತಹ ಪ್ರಕರಣಗಳನ್ನು ಚಾಚುತಪ್ಪದೇ ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ಸಲ್ಲಿಸಿ ಅವರ ಅನುಮೋದನೆ ಪಡೆದು ವರ್ಗಾವಣೆ ಮಾಡತಕ್ಕದ್ದು ಎಂದು ಹೇಳಿದ್ದಾರೆ.

2.ಮೇಲಿನ ಉಲ್ಲೇಖಿತ ದಿನಾಂಕ: 25.06.2024, 10.07.2024 ಮತ್ತು 16.07.2024ರ ಸರ್ಕಾರಿ ಆದೇಶಗಳಲ್ಲಿ 2024 -25ನೇ ಸಾಲಿಗೆ ಗ್ರೂಪ್-ಎ, ಬಿ, ಸಿ ಮತ್ತು ಡಿ ವರ್ಗದ ಅಧಿಕಾರಿ/ನೌಕರರಿಗೆ ಅನ್ವಯವಾಗುವಂತೆ ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇಕಡಾ 6 ರಷ್ಟನ್ನು ಮೀರದಂತೆ ದಿನಾಂಕ: 25.06.2024 ರಿಂದ 31.07.2024 ರವರೆಗೆ ಸಾರ್ವತ್ರಿಕ ವರ್ಗಾವಣೆಗಳನ್ನು ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ದಿನಾಂಕ: 31.07.2024 20243 ಸಾಲಿನ ಸಾರ್ವತ್ರಿಕ ವರ್ಗಾವಣೆ ಅವಧಿಯು ಮುಕ್ತಾಯಗೊಂಡಿರುತ್ತದೆ. ಆದರೆ ನಿಗದಿತ ವರ್ಗಾವಣಾ ಅವಧಿಯ ನಂತರವೂ ಇಲಾಖಾ ಹಂತದಲ್ಲಿ ವರ್ಗಾವಣೆಗಳನ್ನು ಜಾರಿಗೊಳಿಸಿ ನಂತರ ಘಟನೋತ್ತರ ಅನುಮೋದನೆಗಾಗಿ ಪ್ರಸ್ತಾವನೆಗಳನ್ನು ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುತ್ತಿದ್ದು, ಇದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ ಎಂದಿದ್ದಾರೆ.

3. ಈಗಾಗಲೇ ಸಾರ್ವತ್ರಿಕ ವರ್ಗಾವಣಾ ಅವಧಿ ಮುಗಿದಿರುವುದರಿಂದ ಇನ್ನು ಮುಂದೆ ಯಾವುದೇ ಇಲಾಖೆಯಲ್ಲಿ ವರ್ಗಾವಣೆಗಳನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಮಾಡುವುದು ಅತ್ಯಗತ್ಯವಾಗಿದ್ದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರ ಪೂರ್ವಾನುಮೋದನೆಯನ್ನು ಪಡೆಯತಕ್ಕದೆಂದು ಈ ಮೂಲಕ ಸೂಚಿಸಿದೆ. ಒಂದು ವೇಳೆ ಪೂರ್ವಾನುಮೋದನೆಯನ್ನು ಪಡೆಯದೇ ಯಾವುದೇ ವರ್ಗಾವಣೆಗಳನ್ನು ಮಾಡಿದಲ್ಲಿ / ವರ್ಗಾವಣೆ ಮಾಡಿ ಘಟನೋತ್ತರ ಅನುಮೋದನೆಗಾಗಿ ಪ್ರಸ್ತಾವನೆಗಳನ್ನು ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ಕಡತದಲ್ಲಿ ಸಲ್ಲಿಸಿದ್ದಲ್ಲಿ ಸಂಬಂಧಪಟ್ಟ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು / ಪ್ರಧಾನ ಕಾರ್ಯದರ್ಶಿಗಳು / ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರನ್ನು ನೇರ ಜವಾಬ್ದಾರರನ್ನಾಗಿಸಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸುತ್ತಾ, ಸರ್ಕಾರದ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸತಕ್ಕದ್ದೆಂದು ಸ್ಪಷ್ಟಪಡಿಸಿದ್ದಾರೆ.

BREAKING: ಹೈದರಾಬಾದ್ ಕಾಲ್ತುಳಿತಕ್ಕೊಳಗಾದ ಸಂತ್ರಸ್ತೆಯ ಕುಟುಂಬಕ್ಕೆ 50 ಲಕ್ಷ ನೆರವು ನೀಡಿದ ಪುಷ್ಪಾ-2 ನಿರ್ಮಾಪಕ | Pushpa 2 makers donate

ಕಾಂಗ್ರೆಸ್ಸಿನವರು ಬಿಡುಗಡೆ ಮಾಡಿದ ವಿಡಿಯೋಕ್ಕೆ ಯಾವುದೇ ಆಧಾರ, ಬೆಲೆ ಇಲ್ಲ: ಎನ್.ರವಿಕುಮಾರ್

Share. Facebook Twitter LinkedIn WhatsApp Email

Related Posts

ಪೆಟ್ರೋಲ್ ಬಂಕ್‌ಗಳಲ್ಲಿ ಮೊಬೈಲ್ ಬಳಕೆ ನಿಷೇಧವೇಕೆ? ಇಲ್ಲಿದೆ ಅಸಲಿ ಕಾರಣ!

03/04/2026 1:44 PM1 Min Read

ಮಗನನ್ನ ರಾಜಕೀಯಕ್ಕೆ ತಂದು ವಸೂಲಿ ಮಾಡುತ್ತಿರುವ ಸಿಎಂಗೆ, ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ : HDK

03/04/2026 1:38 PM1 Min Read

ಚಾಮರಾಜನಗರದಲ್ಲಿ ಮುಂದುವರೆದ ಚಿರತೆ ಉಪಟಳ, ಭಕ್ತರಲ್ಲಿ ಆತಂಕ ಸೃಷ್ಟಿ!

03/04/2026 1:31 PM1 Min Read
Recent News

BREAKING: ಮತದಾನದ ದಿನದಂದು ಎಲ್ಲಾ ಉದ್ಯೋಗಿಗಳಿಗೆ ವೇತನ ಸಹಿತ ರಜೆ ಘೋಷಿಸಿದ ಚುನಾವಣಾ ಆಯೋಗ

03/04/2026 1:45 PM

ಪೆಟ್ರೋಲ್ ಬಂಕ್‌ಗಳಲ್ಲಿ ಮೊಬೈಲ್ ಬಳಕೆ ನಿಷೇಧವೇಕೆ? ಇಲ್ಲಿದೆ ಅಸಲಿ ಕಾರಣ!

03/04/2026 1:44 PM

ಮಗನನ್ನ ರಾಜಕೀಯಕ್ಕೆ ತಂದು ವಸೂಲಿ ಮಾಡುತ್ತಿರುವ ಸಿಎಂಗೆ, ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ : HDK

03/04/2026 1:38 PM

ಚಾಮರಾಜನಗರದಲ್ಲಿ ಮುಂದುವರೆದ ಚಿರತೆ ಉಪಟಳ, ಭಕ್ತರಲ್ಲಿ ಆತಂಕ ಸೃಷ್ಟಿ!

03/04/2026 1:31 PM
State News
KARNATAKA

ಪೆಟ್ರೋಲ್ ಬಂಕ್‌ಗಳಲ್ಲಿ ಮೊಬೈಲ್ ಬಳಕೆ ನಿಷೇಧವೇಕೆ? ಇಲ್ಲಿದೆ ಅಸಲಿ ಕಾರಣ!

By kannadanewsnow5703/04/2026 1:44 PM KARNATAKA 1 Min Read

ನಾವು ಪೆಟ್ರೋಲ್ ಬಂಕ್‌ಗಳಿಗೆ ಹೋದಾಗ ಅಲ್ಲಿ ‘ಮೊಬೈಲ್ ಬಳಸಬೇಡಿ’ (No Mobile Phones) ಎಂಬ ಎಚ್ಚರಿಕೆ ಫಲಕಗಳನ್ನು ನೋಡಿರುತ್ತೇವೆ. ಅನೇಕರು…

ಮಗನನ್ನ ರಾಜಕೀಯಕ್ಕೆ ತಂದು ವಸೂಲಿ ಮಾಡುತ್ತಿರುವ ಸಿಎಂಗೆ, ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ : HDK

03/04/2026 1:38 PM

ಚಾಮರಾಜನಗರದಲ್ಲಿ ಮುಂದುವರೆದ ಚಿರತೆ ಉಪಟಳ, ಭಕ್ತರಲ್ಲಿ ಆತಂಕ ಸೃಷ್ಟಿ!

03/04/2026 1:31 PM

ಮಂಡ್ಯದಲ್ಲಿ ಶೋಭಾ ಯಾತ್ರೆಯಲ್ಲಿ ಅನುಮತಿ ಪಡೆಯದೆ ಡಿಜೆ ಬಳಸಿದ ಆರೋಪ : ಹಿಂದೂ ಮುಖಂಡರ ವಿರುದ್ಧ ‘FIR’ ದಾಖಲು

03/04/2026 1:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.