ಬೆಳಗಾವಿ : ಮೇವು ಹಾಕಲು ತೆರಳಿದ್ದ ವೇಳೆ ಮಾವುತನನ್ನೇ ತುಳಿದು ದೇವಸ್ಥಾನದ ಆನೆಯೊಂದು ಭೀಕರವಾಗಿ ಕೊಂದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಖನೂರ್ ಗ್ರಾಮದ ಕರಿ ಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಹೌದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಖನುರನಲ್ಲಿ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಆನೆಯ ದಾಳಿಗೆ ಅಲಕನೂರು ಗ್ರಾಮದ ಧರೆಪ್ಪ ಬೇವನೂರು (32) ಮೃತಪಟ್ಟ ಮಾವುತ ಎಂದು ತಿಳಿದು ಬಂದಿದೆ. ಬೆಳಿಗ್ಗೆ ಮೇವು ಹಾಕಲು ತೆರಳಿದಾಗ ಮಾವುತನ ಮೇಲೆ ಆನೆ ದಾಳಿ ಮಾಡಿದೆ.
ಮಾವುತ ಧರೆಪ್ಪನನ್ನು ತುಳಿದು 21 ವರ್ಷದ ಆನೆ ಧ್ರುವ ಕೊಂದಿದೆ . ಕಳೆದ 10 ದಿನದ ಹಿಂದೆ ಅಷ್ಟೆ ಧರೆಪ್ಪ ಗಂಡು ಮಗುವಿನ ತಂದೆಯಾಗಿದ್ದ. ಘಟನಾ ಸ್ಥಳಕ್ಕೆ ಹಾರೂಗೇರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸುತ್ತಿದ್ದಾರೆ.