ಮೈಸೂರು: ಬೆಳಗಾವಿ ಅಧಿವೇಶನದ ಕೊನೆಯ ದಿನದಂದು ಸುವರ್ಣ ಸೌಧದಲ್ಲಿ ದೊಡ್ಡ ಹೈಡ್ರಾಮಾವೇ ನಡೆದುಹೋಗಿದೆ.ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ಅಂಬೇಡ್ಕರ್ ಅವರ ಫೋಟೋ ಹಿಡಿದುಕೊಂಡು ಪ್ರ ತಿಭಟಿಸುತ್ತಿದ್ದರೆ, ಅತ್ತ ಇನ್ನೊಂದು ಕಡೆ ಬಿಜೆಪಿಯವರು ಕೂಡ ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಿಟಿ ರವಿ ಅವರು ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ ಈ ವಿಚಾರವಾಗಿ ಕಾಂಗ್ರೆಸ್ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಅವರು ಹೌದು ಸಿಟಿ ರವಿ ಆ ಪದ ಬಳಸಿದ್ದು ನಿಜ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಸಿಟಿ ರವಿ ಬಳಸಿದ್ದ ‘ಪ್ರಾಸ್ಟಿಟ್ಯೂಟ್’ ಪದಕ್ಕೆ ನಾನೇ ಸಾಕ್ಷಿ ಈಗ ಸಿಂಪತಿ ಗಿಟ್ಟಿಸಿಕೊಳ್ಳಲು ಸಿಟಿ ರವಿ ಅವರು ಡ್ರಾಮಾ ಮಾಡುತ್ತಿದ್ದಾರೆ. ಕೊಲೆ ಮಾಡುವ ಪ್ರಯತ್ನ ನಡೆದಿತ್ತು ಎಂದು ಸಿಟಿ ರವಿ ಅವರು ನಾಟಕ ಮಾಡುತ್ತಿದ್ದಾರೆ ಈ ವಿಚಾರದಲ್ಲಿ ಬಿಜೆಪಿ ನೀಡುತ್ತಿರುವ ಹೇಳಿಕೆಗಳು ಬರೀ ನಾಟಕ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ಎಂಎಲ್ಸಿ ಯತೀಂದ್ರ ಸಿದ್ಧರಾಮಯ್ಯ ತಿಳಿಸಿದರು.
ಆ ಪದ ಕೇಳಿಸಿಕೊಂಡು ನಾನೇ ಒಂದು ಕ್ಷಣ ಶಾಕ್ ಆದೆ. ಸಿಟಿ ರವಿಯವರು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಆ ಪದ ಬಳೆಸಿದ್ದು ನಿಜ. ಏನ್ ಇಂಥಾ ಪದ ಬಳಸುತ್ತಿದ್ದಾರೆ ಎಂದು ಅಂದುಕೊಂಡೆ. ಅಂದು ನನಗಿಂತ ಎರಡು ಸೀಟ್ ಮುಂದೆ ಹೆಬ್ಬಾಳ್ಕರ್ ಅವರು ಕುಳಿತಿದ್ದರು. ಸಹಜವಾಗಿ ನಾನು ಮುಂದೆ ಹೋದಾಗ ಅವರಿಬ್ಬರ ಮಧ್ಯ ಮಾತಿನ ಚಕಮಕಿ ನಡೆಯುತ್ತಿತ್ತು.
ಈ ವೇಳೆ ಸಿಟಿ ರವಿಯವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಡ್ರಗ್ ಅಡಿಕ್ಟ್ ಡ್ರಗ್ ಅಡಿಕ್ಟ್ ಎಂದು ಕೂಗುತ್ತಿದ್ದರು. ಈ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿಟಿ ರವಿ ಅವರಿಗೆ ಕೊಲೆಗಡುಕ ಎನ್ನುತ್ತಿದ್ದರೆ, ಸಿಟಿ ರವಿಯವರು ವೇ…ಎಂದು ಆವಾಚ್ಯ ಪದ ಬಳಸುತ್ತಾರೆ. ನನಗೆ ಸಿಟಿ ರವಿಯವರು ಆ ಪದ ಬಳಸಿದ್ದು ನಂಬಕ್ಕೆ ಆಗಲಿಲ್ಲ ಆದರೆ ನಾನು ಕೇಳಿಸಿಕೊಂಡಿದ್ದು ಅಂತ ಸತ್ಯ ಎಂದು ತಿಳಿಸಿದರು.