ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಮ್ಮ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪೂಜಾ ಸಂಸ್ಕಾರ ಒಂದು ಪ್ರಮುಖ ಆಚರಣೆಯಾಗಿದ್ದು, ದೇವರ ಪೂಜೆ ಮಾಡವಾಗ, ಆರಾಧನೆ ಮಾಡುವಾಗ ನಾವು ದೇವರಿಗೆ ಇಷ್ಟವಾದ ಹೂ, ಹಣ್ಣು ಹಾಗೂ ನೈವೇದ್ಯವನ್ನು ಇಟ್ಟು ಆರಾಧಿಸುತ್ತೇವೆ. ಏಕೆಂದರೆ ಅದರಿಂದ ದೇವರು ಬೇಗ ಒಲಿದು , ನಮ್ಮ ಕೋರಿಕೆಯನ್ನು ಈಡೇರಿಸುವನು ಎಂಬುದು ನಮ್ಮ ನಂಬಿಕೆ. ಪ್ರತಿಯೊಬ್ಬ ದೇವರಿಗೂ ಒಂದು ವಿಶೇಷವಾದ ಫಲ ,ಪುಷ್ಪವಿದ್ದು, ಪ್ರಥಮ ಪೂಜೆಗೆ ಭಾಜನರಾದ ಗಣೇಶನಿಗೂ ಕೂಡಾ ಅಂತದ್ದೇ ಒಂದು ವಿಶೇಷವಾದ ಸಾಮಗ್ರಿ , ಆತನ ಪೂಜೆಗೆ ಅತಿ ಮುಖ್ಯವಾಗಿದೆ.
ಆ ಸಾಮಗ್ರಿ ಗರಿಕೆ ಹುಲ್ಲು, ಗಜಾನನನಿಗೆ ಗರಿಕೆಯೆಂದರೆ ವಿಶೇಷ ಪ್ರೀತಿ. ಅದರಲ್ಲೂ 21 ಗರಿಕೆಯಿಂದ ಈತನನ್ನು ಪೂಜಿಸಿದರೆ , ಸಕಲ ಸಂಕಷ್ಟಗಳು ದೂರಾಗುವುದು. ಹಾಗಾದರೆ ಗರಿಕೆ ಏಕೆ, ಗಣಪನಿಗೆ ಪ್ರಿಯ ಎಂಬುದನ್ನು ತಿಳಿಯೋಣ ಬನ್ನಿ. ಒಮ್ಮೆ ಯಮಪುರಿಯಲ್ಲಿ ವಿಶೇಷ ಔತಣ ನಡೆಯಿತು. ಈ ಔತಣಕ್ಕೆ ಅನೇಕ ದೇವ ದೇವತೆಗಳು, ಅಪ್ಸರೆಯರು, ದೇವ ನರ್ತಕಿಯರು ಎಲ್ಲರೂ ಬಂದರು. ಆಗ ಯಮ ರಾಜನು ಒಬ್ಬ ನರ್ತಕಿಯ ಅಂದಕ್ಕೆ ಮೋಹಗೊಂಡು , ಆಕೆಯಲ್ಲಿ ಅನುರಕ್ತನಾದನು. ಆಗ ಆಕೆಯ ಗರ್ಭದಲ್ಲಿ, ಅನಲಾಸುರ ಎಂಬ ಭಯಾನಕ ದಾನವನ ಜನನವಾಯಿತು. ಅನಲಾಸುರ ಭೀಕರನಾಗಿದ್ದು , ಅವನ ಧ್ವನಿಯಿಂದಲೇ ಭೂಮಂಡಲದಲ್ಲಿ ನಡುಕ ಹುಟ್ಟುತ್ತಿತ್ತು.
ಆತನ ಕಣ್ಣುಗಳಲ್ಲಿ ಬೆಂಕಿಯ ಜ್ವಾಲೆಗಳು ಇದ್ದವು. ಈ ರಾಕ್ಷಸ ದೇವತೆಗಳಿಗೆ ಉಪಟಳ ಕೊಡಲಾರಂಭಿಸಿದ. ಇವನ ಕಾಟದಿಂದ ಕಂಗೆಟ್ಟ ದೇವತೆಗಳು ಶಿವನ ಮೊರೆ ಹೋದರು. ಆಗ ಶಿವ ಅವರಿಗೆ ತನ್ನ ಮಗನಾದ ಗಣೇಶನನ್ನು ಆಶ್ರಯಿಸುವಂತೆ ದೇವತೆಗಳಿಗೆ ಸಲಹೆ ನೀಡಲು ಎಲ್ಲರೂ ಗಣಪನ ಮೊರೆ ಹೋದರು. ದೇವತೆಗಳ ರಕ್ಷಣೆಗೆ ನಿಂತ ಗಣಪನು , ತನ್ನ ವಿರಾಟ್ ರೂಪ ಧರಿಸಿ ಆ ರಾಕ್ಷಸನನ್ನು ನುಂಗಿದನು. ಆದರೆ ಅದಾದ ನಂತರ ಆತನ ದೇಹದ ಉಷ್ಣತೆ ವಿಪರೀತವಾಗಿ ಗಣೇಶನು ಮಲಗಿಬಿಟ್ಟನು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಆಗ ಇಂದ್ರನು, ಶೀತಲನಾದ ಚಂದ್ರನನ್ನು ಗಣೇಶನ ಮುಡಿಯಲ್ಲಿಟ್ಟ, ಅಂದಿನಿಂದ ಗಣೇಶನಿಗೆ ಬಾಲಚಂದ್ರ ಎಂಬ ಹೆಸರು ಬಂತು. ಆದರೆ ದೇಹದ ತಾಪ ಕಡಿಮೆಯಾಗಲಿಲ್ಲ. ಶ್ರೀ ಮಹಾವಿಷ್ಣು ತನ್ನ ಕಮಲವನ್ನು ಗಣೇಶನ ದೇಹದ ಮೇಲಿರಿಸಿದ, ಆಗ ಗಣಪನಿಗೆ ಪದ್ಮಪಾಣಿಯೆಂಬ ಹೆಸರು ಬಂತು. ಆದರೂ ತಾಪ ಕಡಿಮೆಯಾಗಲಿಲ್ಲ. ಕಡೆಗೆ ಸಾವಿರಾರು ಸಂಖ್ಯೆಯಲ್ಲಿ ಬಂದ ಋಷಿ ಪುಂಗವರು, ೨೧ ಗರಿಕೆಯನ್ನು ಆತನ ಹಣೆಯ ಮೇಲಿಟ್ಟರು, ಅದ್ಭುತ ಎಂಬಂತೆ ಗಣಪನ ದೇಹದ ತಾಪ ಇಳಿಯಿತು.
ಗಣಪನು ಆಗ ಯಾರು ತನ್ನನ್ನು 21 ಗರಿಕೆಗಳಿಂದ ಆರಾಧಿಸುವರೋ, ಅವರಿಗೆ ತನ್ನ ಆಶೀರ್ವಾದ ಇರುತ್ತದೆ ಎಂದು ಅಭಯ ನೀಡಿದ. ಅಂದಿನಿಂದ ಗರಿಕೆ ಗಣೇಶನಿಗೆ ಪ್ರಿಯವಾಯಿತು. ಇನ್ನೊಂದು ಕತೆಯ ಪ್ರಕಾರ ಸುಂದರಿಯಾದ ಅಪ್ಸರೆಯೊಬ್ಬಳು ಗಣೇಶನನ್ನು ಇಷ್ಟ ಪಟ್ಡು ವಿವಾಹವಾಗಲು ಬಯಸುತ್ತಾಳೆ. ಆದರೆ ಮಾತೆ ಪಾರ್ವತಿ ಅದಕ್ಕೆ ಇಷ್ಟವಿಲ್ಲದೆ ಆ ಅಪ್ಸರೆಗೆ ಭೂಮಿಯ ಮೇಲೆ ಹುಲ್ಲಾಗಿ, ಯಾರಿಗೂ ಕಾಣದಂತೆ ಇರು ಎಂದು ಶಾಪ ನೀಡುತ್ತಾಳೆ. ಹೀಗೆ ಶಾಪದಿಂದ ಗರಿಕೆಯಾದರೂ ಆಕೆ ಗಣೇಶನಿಗೆ ಪ್ರಿಯವಾಗಿ, ಆತನ ಪೂಜೆಯಲ್ಲಿ ವಿಶೇಷ ಸ್ಥಾನ ಪಡೆಯುತ್ತಾಳೆ. ಹೀಗೆ ಎರಡು ಕತೆಗಳಿವೆ. ಕತೆ ಏನೇ ಆದರೂ ಇಂದು ಎಲ್ಲ ಕಡೆಗಳಲ್ಲಿ ಗರಿಕೆಯಿಲ್ಲದೆ ಗಜಮುಖನ ಆರಾಧನೆ ಸಂಪೂರ್ಣ ಎನಿಸುವುದಿಲ್ಲ. 21 ಗರಿಕೆಯನ್ನಿಟ್ಟು ಆರಾಧಿಸುವುದು ಶ್ರೇಷ್ಠ ಎನಿಸಿದೆ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559