ಕೋಲಾರ: ಸರ್ಕಾರಿ ನೌಕರರಿಗೂ ಬಿಪಿಎಲ್ ರೇಷನ್ ಕಾರ್ಡ್ ಪಡೆದಿರುವ ಬಗ್ಗೆ ಕಟ್ಟು ನಿಟ್ಟಿನ ಪರಿಶೀನೆ ಮಾಡಿ, ರದ್ದು ಪಡಿಸಲಾಗುತ್ತಿದೆ. ಈ ನಡುವೆ ಪಡಿತರ ಪಡೆಯಲು ಎಲ್ಲರ ವೇತನ ಪ್ರಮಾಣ ಪತ್ರ ಅಗತ್ಯವಿಲ್ಲ ಎಂಬುದಾಗಿ ಆಹಾರ ಇಲಾಖೆ ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದ್ದಾರೆ. ಈ ಮೂಲಕ ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಇಂದು ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪಡಿತರ ಪಡೆಯಲು ಎಲ್ಲರ ವೇತನ ಪ್ರಮಾಣ ಪತ್ರ ಅಗತ್ಯವಿಲ್ಲ. ಬಿಪಿಎಲ್ ಕಾರ್ಡ್ ಪರಿಶೀಲನೆ ವೇಳೆ ಕೊಂಚ ಏರುಪೇರಾಗಿದೆ ಎಂಬುದಾಗಿ ತಿಳಿಸಿದರು.
ಬಿಪಿಎಲ್ ಕಾರ್ಡ್ ಹೊಂದಿರೋರು ಸರ್ಕಾರಿ ನೌಕರರು ಆಗಿರಬಾರದು. ಅವರ ವಾರ್ಷಿಕ ಆದಾಯದ ಮಿತಿ 1.20 ಲಕ್ಷ ಮೀರಬಾರದು. ಇಂತವರ ರೇಷನ್ ಕಾರ್ಡ್ ರದ್ದು ಪಡಿಸೋದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
BREAKING: ಎಪಿಗಮಿಯಾ ಸಹ ಸಂಸ್ಥಾಪಕ ರೋಹನ್ ಮಿರ್ಚಂದಾನಿ ಹೃದಯಾಘಾತದಿಂದ ನಿಧನ
‘ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವ ಸಾಧ್ಯತೆಯಿಲ್ಲ: ದಿಗ್ವಿಜಯ್ ಸಿಂಗ್