ಬೆಂಗಳೂರು : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುರಿತು ಅಶ್ಲೀಲ ಪದ ಬಳಕೆ ಮಾಡಿದ್ದರ ಕುರಿತಂತೆ ಬಿಜೆಪಿಯ ಎಂಎಲ್ಸಿ ಸಿಟಿ ರವಿಯ ವಿರುದ್ಧ ಕಾಂಗ್ರೆಸ್ಸಿನ ಮಾಜಿ ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದ್ದು, ಎಂಎಲ್ಸಿ ಸಿಟಿ ರವಿ ಕೂಡ ತಾಯಿಯ ಗರ್ಭದಿಂದಲೇ ಹುಟ್ಟಿದ್ದಾರೆ ಅವರೇನು ಕರಣನ ರೀತಿ ಬೇರೆ ಇನ್ಯಾವುದೋ ರೀತಿಯಲ್ಲಿ ಹುಟ್ಟಿದ್ದಾರೋ ಏನೋ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಂಎಲ್ಸಿ ಸಿಟಿ ರವಿಗೆ ಬೆಂಬಲ ಕೊಡುವುದು ಎಷ್ಟು ಸರಿ? ಸಿಟಿ ರವಿ ಏನೇನೋ ಹೇಳುತ್ತಾರೆ ಅವರು ಕ್ಷಮೆ ಕೇಳಬೇಕಿತ್ತು. ಅವರ ಮನೆಯಲ್ಲಿಯೂ ತಾಯಿ ಇದ್ದಾರೆ, ಮಕ್ಕಳಿದ್ದಾರೆ. ಎಂಎಲ್ಸಿ ಸಿಟಿ ರವಿ ಕೂಡ ತಾಯಿ ಗರ್ಭದಿಂದಲೇ ಬಂದಿದ್ದಾರೆ. ಬೇರೆ ಯಾವ ರೀತಿ ಹುಟ್ಟಿ ಬಂದಿದ್ದಾರಾ? ಎಂದು ಅವರ ವಿರುದ್ಧ ಡಿಕೆ ಸುರೇಶ್ ಆಕ್ರೋಶ ಹೊರಹಾಕಿದರು.
ಮೌಲ್ಯಗಳು ಕುಸಿತ ಆಗುತ್ತಿವೆ. ಓಲೈಕೆ ರಾಜಕಾರಣ ಹೆಚ್ಚಾಗುತ್ತಿದೆ. ಸಿಟಿ ರವಿ ಕರ್ಣನ ರೀತಿ ಬೇರೆ ಹೇಗೋ ಹುಟ್ಟಿದ್ದಾರೋ ಏನೋ? ಮೋದಿ ಅವರು ದೈವಾಂಶ ಸಂಭೂತ ಹುಟ್ಟಿ ಬಂದಿದ್ದೇನೆ ಎಂದು ಹೇಳಿದ್ದರು. ಅದೇ ರೀತಿ ಬಿಜೆಪಿ ಎಂಎಲ್ಸಿ ಸಿಟಿ ರವಿ ಹುಟ್ಟಿ ಬಂದಿರಬೇಕು ಎಂದು ಸಿಟಿ ರವಿ ಬಗ್ಗೆ ಮಾಜಿ ಸಂಸದ ಡಿಕೆ ಸುರೇಶ್ ವ್ಯಂಗ್ಯವಾಡಿದರು.
ವಿಪಕ್ಷದ ನಾಯಕರು ಈ ರೀತಿಯ ನಡವಳಿಕೆ ತೋರಿಸುವ ಮೂಲಕ ಕರ್ನಾಟಕದ ಗೌರವ ಕಡಿಮೆ ಮಾಡಿದಂತೆ ಆಗುತ್ತಿದೆ. ಕನ್ನಡಿಗರು ಸುಸಂಸ್ಕೃತರು ಎನ್ನುವ ಭಾವನೆ ಹೋಗುತ್ತಿದೆ. ರಾಜ್ಯದಲ್ಲಿ ಒಂದಾದ ಮೇಲೆ ಒಂದು ಘಟನೆ ಆಗುತ್ತಲೇ ಇದೆ. ಮೌಲ್ಯಗಳು ಕುಸಿತ ಆಗುತ್ತಿದೆ ಓಲೈಕೆ ರಾಜಕಾರಣ ಹೆಚ್ಚಾಗುತ್ತಿದೆ.