ತುಮಕೂರು : ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪತಿ ಹಾಗೂ ಭಾವನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸೆಬ್ಬೇನಹಳ್ಳಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಪೂಜಾ (25) ಎಂದು ತಿಳಿದುಬಂದಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಸಬ್ಬೆನಹಳ್ಳಿಯ ಹೊಂಡದಲ್ಲಿ ಉಗಳ ಮೃತ ದೇಹ ಸಿಕ್ಕಿದ್ದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪೂಜಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ಕೂಡ ಇದೀಗ ಮೂಡುತ್ತಿದೆ. ಪತಿ ಓಂಕಾರ್ ಹಾಗೂ ಆತನ ಅಣ್ಣ ರಾಜಣ್ಣ ಸೇರಿ ಪೂಜಾಳಿಗೆ ಕಿರುಕುಳ ನೀಡುತ್ತಿದ್ದರು ಇದರಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪ ಕೇಳಿಬಂದಿದೆ.
ಕಳೆದ ನಾಲ್ಕು ದಿನಗಳ ಹಿಂದೆ ರಾಜಣ್ಣ, ಪೂಜಾಳನ್ನ ಗಂಡನ ಮನೆಗೆ ಕರೆದೊಯ್ದಿದ್ದ. ಆದ್ರೆ, ಎರಡು ದಿನಗಳಿಂದ ನಾಪತ್ತೆಯಾಗಿದ್ದ ಪೂಜಾ, ಇಂದು ಸೆಬ್ಬೇನಹಳ್ಳಿಯ ಹೊಂಡದಲ್ಲಿ ಪೂಜ ಶವ ಪತ್ತೆಯಾಗಿದೆ. ಸ್ಥಳಕ್ಕೆ ಹಂದನಕೆರೆ ಪೊಲೀಸರು ಭೇಟಿ ತನಿಖೆ ನಡೆಸಿದ್ದಾರೆ.