Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಕ್ಷರ ಲೋಕದ ಅನನ್ಯ ಸಾಧಕ: ಧನಾತ್ಮಕ ಪತ್ರಿಕೋದ್ಯಮದ ಹರಿಕಾರ ‘ವೆಂಕಟೇಶ ಸಂಪ’ಗೆ ‘ಕೆಯುಡಬ್ಲ್ಯೂಜೆ’ ಪ್ರಶಸ್ತಿ ಗರಿ

02/04/2026 10:57 PM

21 ವರ್ಷಗಳ ನಂತರ ನ್ಯಾಯದಾನ: ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೊಪ್ಪಳ ನ್ಯಾಯಾಲಯ

02/04/2026 9:53 PM

ಲಂಚ ಪಡೆದಿದ್ದ ಅಧಿಕಾರಿಗೆ ಜೈಲು ಶಿಕ್ಷೆ: ಶಿವಮೊಗ್ಗ ನ್ಯಾಯಾಲಯದ ಮಹತ್ವದ ತೀರ್ಪು

02/04/2026 9:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಡಿ.22ರಂದು ಸಿಎಂ ಸಿದ್ಧರಾಮಯ್ಯ ‘ಕಲಬುರ್ಗಿ ಜಯದೇವ ಆಸ್ಪತ್ರೆ’ ಉದ್ಘಾಟನೆ: ಸಚಿವ ಡಾ.ಶರಣಪ್ರಕಾಶ ಪಾಟೀಲ
KARNATAKA

ಡಿ.22ರಂದು ಸಿಎಂ ಸಿದ್ಧರಾಮಯ್ಯ ‘ಕಲಬುರ್ಗಿ ಜಯದೇವ ಆಸ್ಪತ್ರೆ’ ಉದ್ಘಾಟನೆ: ಸಚಿವ ಡಾ.ಶರಣಪ್ರಕಾಶ ಪಾಟೀಲ

By kannadanewsnow0920/12/2024 7:58 PM

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಕೇಂದ್ರವಾದ ಕಲಬುರಗಿಯಲ್ಲಿ ಕೆ.ಕೆ.ಆರ್.ಡಿ.ಬಿ.ಯ 302 ಕೋಟಿ ರೂ. ಸೇರಿ ಒಟ್ಟಾರೆ 327.17 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 371 ಹಾಸಿಗೆ ಸಾಮರ್ಥ್ಯದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯ ಕಲಬುರಗಿ ಶಾಖಾ ಆಸ್ಪತ್ರೆ ಇದೇ ಡಿಸೆಂಬರ್ 22 ರಂದು ಲೋಕಾರ್ಪಣೆ ಮಾಡಲಾಗುತ್ತಿದ್ದು, ಕಾರ್ಪೊರೇಟ್ ಆಸ್ಪತ್ರೆ ಮೀರಿಸುವ ಗುಣಮಟ್ಟದ ಸೇವೆ ಇಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಶುಕ್ರವಾರ ನೂತನ ಜಯದೇವ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರದೇಶದ ಸಚಿವರು-ಶಾಸಕರು ಅಗಮಿಸಲಿದ್ದು, ಅಂದಾಜು 2,500 ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದರು.

ನೂತನ ಆಸ್ಪತ್ರೆಯ ಸಾಮರ್ಥ್ಯಕ್ಕೆ ತಕ್ಕಂತೆ ಈಗಿರುವ 10 ಹೃದ್ರೋಗ ವೈದ್ಯರ ಜೊತೆಗೆ ಹೆಚ್ಚುವರಿಯಾಗಿ 21 ವೈದ್ಯರು, 120 ಸ್ಟಾಫ್ ನರ್ಸ್ ಸೇರಿದಂತೆ ಇತರೆ ಸಿಬ್ಬಂದಿಗಳ ನೇಮಕಾತಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ಅದರಂತೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.

ನೂತನ ಜಯದೇವ ಆಸ್ಪತ್ರೆಯಲ್ಲಿ 3 ಕ್ಯಾತಲ್ಯಾಬ್, ಮೂರು ಅಪರೇಷನ್ ಥಿಯೇಟರ್, ಒಂದು ಹೈಬ್ರಿಡ್ ಓ.ಟಿ. ಇರಲಿದೆ. ಎಕ್ಸ್ರೇ, ಇ.ಎಂ.ಆರ್.ಐ., ಬ್ಲಡ್ ಬ್ಯಾಂಕ್ ಸೇವೆ ಲಭ್ಯವಿರಲಿದೆ. 105 ಐ.ಸಿ.ಸಿ.ಯು ಬೆಡ್, 120 ಜನರಲ್ ಬೆಡ್ ಸೇರಿದಂತೆ ಒಟ್ಟಾರೆ 371 ಹಾಸಿಗೆ ಸಾಮರ್ಥ್ಯ ಇದ್ದು, ಅತ್ಯಾಧುನಿಕ ಸೌಲಭ್ಯದೊಂದಿಗೆ ಬಿ.ಪಿ.ಎಲ್ ರೋಗಿಗಳಿಗೆ ಉಚಿತ ಮತ್ತು ಎ.ಪಿ.ಎಲ್. ರೋಗಿಗಳಿಗೆ ಶೇ.30ರ ರಿಯಾಯಿತಿ ದರದೊಂದಿಗೆ ಚಿಕಿತ್ಸೆ ಇಲ್ಲಿ ಸಿಗಲಿದೆ ಎಂದರು.

ಬೆಂಗಳೂರು, ಮೈಸೂರು ಬಿಟ್ಟರೆ ರಾಜ್ಯದಲ್ಲಿ ಮೂರನೇ ಸ್ವಂತ ಕಟ್ಟಡ ಕಲಬುರಗಿಯಲ್ಲಿ ಆಸ್ಪತ್ರೆ ಹೊಂದಲಿದ್ದು, ಬೆಂಗಳೂರು ಬಿಟ್ಟರೆ ಕಲಬುರಗಿ ಶಾಖಾ ಆಸ್ಪತ್ರೆಯಲ್ಲಿ ವಸ್ಕುಲರ್ ಸರ್ಜರಿ ಸೇವೆ ಸಹ ನೀಡಲು ಉದ್ದೇಶಿಸಲಾಗಿದೆ. ಇದು ಕಲ್ಯಾಣ ಕರ್ನಾಟಕ ಭಾಗದಲ್ಲಿಯೆ ಮೊದಲನೇಯದಾಗಲಿದೆ ಎಂದ ಅವರು ನೂತನ ಆಸ್ಪತ್ರೆಯಲ್ಲಿ ನೀರಿನ ಕೊರತೆ ಎದುರಾಗದಂತೆ 7 ಲಕ್ಷ ಲೀ. ನೀರು ಸಾಮರ್ಥ್ಯ ಟ್ಯಾಂಕ್ ಸ್ಥಾಪಿಸಿದ್ದು, 11ಕೆ.ವಿ. ವಿದ್ಯುತ್ ಕೇಂದ್ರವನ್ನು 33ಕೆ.ವಿ.ಗೆ ಮೇಲ್ದರ್ಜೇಗೇರಿಸಲಾಗಿದೆ ಎಂದರು.

3 ತಿಂಗಳಲ್ಲಿ ಸೂಪರ್ ಸ್ಪೆಷಾಲಿಟ್ಟಿ ಆಸ್ಪತ್ರೆ ಲಭ್ಯ:

ಜಯದೇವ ಆಸ್ಪತ್ರೆ ಉದ್ಘಾಟನೆ ನಂತರ ಮುಂದಿನ ಮೂರು ತಿಂಗಳಲ್ಲಿ ಜಿಮ್ಸ್ ಆಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಗಾಟಿಸಿ ಸಾರ್ವಜನಿಕರ ಸೇವೆಗೆ ಲಭ್ಯಗೊಳಿಸುವುದು ತಮ್ಮ ಮುಂದಿನ ಗುರಿ ಎಂದ ಅವರು, ಹಳೇ ಜಿಲ್ಲಾ ಆಸ್ಪತ್ರೆ ಕಡೆವಿ ಅಲ್ಲಿ 100 ಹಾಸಿಗೆಯ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಸಲಾಗುವುದು. ಜಿಮ್ಸ್ ಆವರಣದಲ್ಲಿಯೇ 50 ಹಾಸಿಗೆಯ ಕ್ರಿಟಿಕಲ್ ಕೇರ್ ಯೂನಿಟ್, ಸುಟ್ಟು ಗಾಯಗಳ ಘಟಕ ಸ್ಥಾಪಿಸಲಾಗುತ್ತಿದೆ. ಇದಲ್ಲದೆ ಗುಲಬರ್ಗಾ ವಿ.ವಿ.ಯಲ್ಲಿ 10 ಎಕರೆ ಜಮೀನಿನಲ್ಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಲಾಗುವುದು ಎಂದು ಡಾ.ಶರಣಪ್ರಕಾಶ ಪಾಟೀಲ ವಿವರಿಸಿದರು.

ಜಯದೇವ ಆಸ್ಪತ್ರೆಯಿಂದ 5.75 ಲಕ್ಷ ಓ.ಪಿ.ಡಿ. ಸೇವೆ: 

ಹಿಂದೆ 2016ರಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿಯೇ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಜಯದೇವ ಆಸ್ಪತ್ರೆ ತಾತ್ಕಲಿಕ ಆರಂಭಿಸಲಾಗಿತ್ತು. ಕಳೆದ 8 ವರ್ಷಗಳ ಅವಧಿಯಲ್ಲಿ ಈ ಆಸ್ಪತ್ರೆಯಿಂದ 5.75 ಲಕ್ಷ ಜನ ಮತ್ತು 18,550 ಮಕ್ಕಳು ಓ.ಪಿ.ಡಿ. ಸೇವೆ ಪಡೆದಿದ್ದಾರೆ. 47,500 ಜನ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದು, 39,462 ಜನ ಕ್ಯಾತ್‌ಲ್ಯಾಬ್ ಸೇವೆಗೆ ಒಳಗಾಗಿದ್ದಾರೆ. 25,000 ಜನ ಎನ್ಜಿಯೋಗ್ರಾಮ್ ಮಾಡಿಸಿದ್ದು, 13,000 ಎನ್ಜಿಯೋಪ್ಲಾಸ್ಟಿಸ್, 300 ಜನ ಪೇಸ್ ಮೇಕರ್ ಹಾಕಿಕೊಂಡಿದ್ದು, 1,300 ಜನ ಓಪನ್ ಹಾರ್ಟ್ ಸರ್ಜರಿಗೆ ಒಳಗಾಗಿದ್ದಾರೆ. 3.92 ಲಕ್ಷ ಜನ ಇ.ಸಿ.ಜಿ, 2.14 ಲಕ್ಷ ಜನ ಎಕೊಓ ಟೆಸ್ಟ್ ಮಾಡಿಸಿದ್ದು, 53,399 ಜನ ಎಕ್ಸ್ರೇ ಮಾಡಿಸಿಕೊಂಡಿದ್ದಾರೆ ಎಂದ ಅವರು, ಆಸ್ಪತ್ರೆ ಸ್ಥಾಪನೆಯಿಂದ ಇಲ್ಲಿನ ಜನರು ದೂರದ ಬೆಂಗಳೂರು, ಸೋಲಾಪೂರ ಹೋಗುವುದು ತಪ್ಪಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಎಂ.ವೈ.ಪಾಟೀಲ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ ಸಿ.ಇ.ಓ ಭಂವರ್ ಸಿಂಗ್ ಮೀನಾ, ಡಿ.ಸಿ.ಎಫ್ ಸುಮಿತ್ ಪಾಟೀಲ, ಸಹಾಯಕ ಆಯುಕ್ತೆ ಸಾಹಿತ್ಯ, ಮಹಾನಗರ ಪಾಲಿಕೆ ಪ್ರಭಾರಿ ಆಯುಕ್ತ ಅವಿನಾಶ ಶಿಂಧೆ, ಕೆ.ಕೆ.ಆರ್.ಟಿ.ಸಿ ಎಂ.ಡಿ. ಎಂ.ರಾಚಪ್ಪ, ಕಲಬುರಗಿಯ ಜಯದೇವ ಶಾಖಾ ಆಸ್ಪತ್ರೆಯ ಪ್ರಭಾರಿ ಅಧೀಕ್ಷಕ ಡಾ.ವಿರೇಶ ಪಾಟೀಲ, ಸಮನ್ವಯಾಧಿಕಾರಿ ಸಂತೋಷ್ ಇದ್ದರು.

ನಂತರ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಲೋಕಾರ್ಪಣೆಗೆ ಸಿದ್ದಗೊಂಡಿರುವ ಆಸ್ಪತ್ರೆಯ ವಿವಿಧ ವಿಭಾಗ, ವೇದಿಕೆ ಸ್ಥಳ ಪರಿಶೀಲಿಸಿ ಕಾಯಕ್ರಮ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆೆ ಸೂಚಿಸಿದ್ದರು.

ಹೊಸ ವರ್ಷಾಚರಣೆಗೆ ಸಿದ್ಧರಾಗಿರೋರಿಗೆ ಗುಡ್ ನ್ಯೂಸ್ | New Year Celebration

ಡಾ.ಅಂಬೇಡ್ಕರ್ ಅವರನ್ನು ನಿರಂತರವಾಗಿ ನೋಯಿಸಿ, ವಂಚಿಸಿದ ಕಾಂಗ್ರೆಸ್ ಪಕ್ಷ: ಛಲವಾದಿ ನಾರಾಯಣಸ್ವಾಮಿ

Share. Facebook Twitter LinkedIn WhatsApp Email

Related Posts

ಅಕ್ಷರ ಲೋಕದ ಅನನ್ಯ ಸಾಧಕ: ಧನಾತ್ಮಕ ಪತ್ರಿಕೋದ್ಯಮದ ಹರಿಕಾರ ‘ವೆಂಕಟೇಶ ಸಂಪ’ಗೆ ‘ಕೆಯುಡಬ್ಲ್ಯೂಜೆ’ ಪ್ರಶಸ್ತಿ ಗರಿ

02/04/2026 10:57 PM2 Mins Read

21 ವರ್ಷಗಳ ನಂತರ ನ್ಯಾಯದಾನ: ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೊಪ್ಪಳ ನ್ಯಾಯಾಲಯ

02/04/2026 9:53 PM1 Min Read

ಲಂಚ ಪಡೆದಿದ್ದ ಅಧಿಕಾರಿಗೆ ಜೈಲು ಶಿಕ್ಷೆ: ಶಿವಮೊಗ್ಗ ನ್ಯಾಯಾಲಯದ ಮಹತ್ವದ ತೀರ್ಪು

02/04/2026 9:14 PM1 Min Read
Recent News

ಅಕ್ಷರ ಲೋಕದ ಅನನ್ಯ ಸಾಧಕ: ಧನಾತ್ಮಕ ಪತ್ರಿಕೋದ್ಯಮದ ಹರಿಕಾರ ‘ವೆಂಕಟೇಶ ಸಂಪ’ಗೆ ‘ಕೆಯುಡಬ್ಲ್ಯೂಜೆ’ ಪ್ರಶಸ್ತಿ ಗರಿ

02/04/2026 10:57 PM

21 ವರ್ಷಗಳ ನಂತರ ನ್ಯಾಯದಾನ: ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೊಪ್ಪಳ ನ್ಯಾಯಾಲಯ

02/04/2026 9:53 PM

ಲಂಚ ಪಡೆದಿದ್ದ ಅಧಿಕಾರಿಗೆ ಜೈಲು ಶಿಕ್ಷೆ: ಶಿವಮೊಗ್ಗ ನ್ಯಾಯಾಲಯದ ಮಹತ್ವದ ತೀರ್ಪು

02/04/2026 9:14 PM

ಹಳೆಯ ವಸ್ತುಗಳನ್ನು ಹೊರಹಾಕಿ, ಹೊಸ ಜೀವನಕ್ಕೆ ದಾರಿ ಮಾಡಿ! ಮನೆಯ ಸ್ವಚ್ಛತೆಯಿಂದ ಮಾನಸಿಕ ಆರೋಗ್ಯ ಸುಧಾರಿಸುವುದು ಹೇಗೆ?

02/04/2026 9:06 PM
State News
KARNATAKA

ಅಕ್ಷರ ಲೋಕದ ಅನನ್ಯ ಸಾಧಕ: ಧನಾತ್ಮಕ ಪತ್ರಿಕೋದ್ಯಮದ ಹರಿಕಾರ ‘ವೆಂಕಟೇಶ ಸಂಪ’ಗೆ ‘ಕೆಯುಡಬ್ಲ್ಯೂಜೆ’ ಪ್ರಶಸ್ತಿ ಗರಿ

By kannadanewsnow0902/04/2026 10:57 PM KARNATAKA 2 Mins Read

ಬೆಂಗಳೂರು: ಪತ್ರಿಕೋದ್ಯಮವೆಂದರೆ ಕೇವಲ ಸುದ್ದಿಯನ್ನಷ್ಟೇ ನೀಡುವುದಲ್ಲ, ಅದು ಸಮಾಜವನ್ನು ತಿದ್ದುವ ಮತ್ತು ಪ್ರೇರೇಪಿಸುವ ಶಕ್ತಿಯಾಗಬೇಕು ಎಂಬುದನ್ನು ಕಳೆದ ಎರಡು ದಶಕಗಳಿಂದ…

21 ವರ್ಷಗಳ ನಂತರ ನ್ಯಾಯದಾನ: ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೊಪ್ಪಳ ನ್ಯಾಯಾಲಯ

02/04/2026 9:53 PM

ಲಂಚ ಪಡೆದಿದ್ದ ಅಧಿಕಾರಿಗೆ ಜೈಲು ಶಿಕ್ಷೆ: ಶಿವಮೊಗ್ಗ ನ್ಯಾಯಾಲಯದ ಮಹತ್ವದ ತೀರ್ಪು

02/04/2026 9:14 PM

ರಾಜ್ಯದ ಉಪ ಚುನಾವಣೆಯಲ್ಲಿ ಪ್ರತಿ ಹಳ್ಳಿಗೆ 5-10 ಲಕ್ಷ ಹಂಚಿಕೆ: ಕಾಂಗ್ರೆಸ್ ವಿರುದ್ಧ ಚಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

02/04/2026 8:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.