ದಾವಣಗೆರೆ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುರಿತು ಬಿಜೆಪಿಯ MLA ಸಿಟಿ ರವಿ ಅವ್ರು ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಿ ನಿನ್ನೆ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು ಸಿಟಿ ರವಿಯವರನ್ನು ಅರೆಸ್ಟ್ ಮಾಡಿದರು. ಈ ವಿಚಾರವಾಗಿ ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ MP ರೇಣುಕಾಚಾರ್ಯ ಸಿಟಿ ರವಿ ಅವರನ್ನು ಕೊಲೆ ಮಾಡುವ ಉದ್ದೇಶ ಇತ್ತು ಎಂದು ಸ್ಫೋಟಕವಾದ ಹೇಳಿಕೆ ನೀಡಿದ್ದಾರೆ.
MLC ಸಿಟಿ ರವಿ ಹತ್ಯೆ ಮಾಡುವ ಉದ್ದೇಶವಿತ್ತು. ಸಿಟಿ ರವಿ ತಲೆಗೆ ಪೆಟ್ಟಾಗಿದೆ, ಇಡೀ ರಾತ್ರಿ ವ್ಯಾನಿನಲ್ಲಿ ಸುತ್ತಾಡಿಸಿದ್ದಾರೆ. ಇದರ ಹಿಂದೆ ಸಿಟಿ ರವಿ ಅವರ ಹತ್ಯೆಯ ಉದ್ದೇಶವಿದೆ. ಸಿಟಿ ರವಿ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಏಕವಚನದಲ್ಲಿ ಮಾತನಾಡಿದ್ದಾರೆ.ಸಿಟಿ ರವಿ ಮಾತನಾಡಿದ್ದು ರೆಕಾರ್ಡ್ ಆಗಿಲ್ಲವೆಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಹಾಗಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷಮೆ ಕೇಳಬೇಕು ಎಂದು ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.