ಬೆಳಗಾವಿ : ನಿನ್ನೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯಲ್ಸಿ ಸಿಟಿ ರವಿ ಅವರನ್ನು ಇದೀಗ ಬೆಳಗಾವಿಯ ಜೆಎಂಎಫ್ ಸಿ ಕೋರ್ಟಿಗೆ ಪೊಲೀಸರು ಹಾಜರುಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕೋರ್ಟ್ ಹಾಲ್ ನಲ್ಲಿ ಸಿಟಿ ರವಿ ಗಳಗಳನೆ ಅತ್ತ ಪ್ರಸಂಗ ನಡೆಯಿತು. ಕಣ್ಣೀರು ಹಾಕಿದ ಸಿ ಟಿ ರವಿ ಅವರಿಗೆ ಬಿಜೆಪಿ ನಾಯಕರು ಸಮಾಧಾನ ಹೇಳಿದರು. ಸಿಟಿ ರವಿಗೆ ವಿಪಕ್ಷ ನಾಯಕ ಆರ್ ಅಶೋಕ ದೈರ್ಯ ತುಂಬಿದರು. ಬಿಜೆಪಿ ನಾಯಕರು ಹಾಗೂ ವಕೀಲರು ನ್ಯಾಯಾಧೀಶರಿಗಾಗಿ ಕಾಯುತ್ತಿದ್ದಾರೆ. ಗಳಗಳನೆ ಅತ್ತ ಸಿಟಿ ರವಿ ಅವರಿಗೆ ಮಹೇಶ್ ತೆಂಗಿನ ಕಾಯಿ ಹಾಗೂ ಸುನಿಲ್ ಕುಮಾರ್ ಆತ್ಮಸ್ಥೈರ್ಯ ತುಂಬಿದರು.
ಸಿಟಿ ರವಿ ಕೋರ್ಟ್ ಗೆ ಹಾಜರು
ನಿನ್ನೆ ಸುವರ್ಣಸೌಧದಲ್ಲಿ ಕಲಾಪದ ಸಂದರ್ಭದಲ್ಲಿ ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆಗೆ ವಿರೋಧಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬಿಜೆಪಿಯ ಸದಸ್ಯರು ಕೂಡ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಟಿ ರವಿ ಅವರಿಗೆ ಕೊಲೆಗಡುಕ ಎಂದು ಕರೆದರೆ, ಆ ವೇಳೆ ಸಿಟಿ ರವಿಯವರು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 75 ಹಾಗೂ 79 ಕಾಯ್ದೆಯ ಅಡಿ FIR ದಾಖಲಾಗಿದೆ.
ಬಳಿಕ ಸುವರ್ಣ ಸೌಧದಿಂದ ಭದ್ರತೆಯೊಂದಿಗೆ ಹೊರಬಂದ ಸಿಟಿ ರವಿ ಅವರನ್ನು ಪೊಲೀಸರು ಅಲ್ಲಿಂದಲೇ ಅವರನ್ನು ಎತ್ತಿಕೊಂಡು ಪೋಲಿಸ್ ವಾಹನದಲ್ಲಿ ಕೂಡಿಸಿಕೊಂಡು ಖಾನಾಪುರ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಇದೀಗ ಇಂದು ಬೆಳಗಾವಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪೊಲೀಸರು ಸಿಟಿ ರವಿ ಅವರನ್ನು ಕರೆತಂದು JMFC ಕೋರ್ಟ್ ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಸದ್ಯ ಬಿಜೆಪಿ ನಾಯಕರು ಹಾಗೂ ವಕೀಲರು ನ್ಯಾಯಾಧೀಶರಿಗಾಗಿ ಕಾಯುತ್ತಿದ್ದಾರೆ.