ಬೆಳಗಾವಿ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಎಂಎಲ್ಸಿ ಸಿಟಿ ರವಿ ಅವರು ಅವಾಚ್ಯವಾಗಿ ಪದ ಬಳಿಸಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಇದೀಗ ಸುವರ್ಣ ಸೌಧದ ಪಡಸಾಲೆಯಲ್ಲಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಖಾಸಗಿ ಪಿಎ ಸಂಗನಗೌಡ ದಾಂದಲೆ ಮಾಡಿದ್ದು, ಪೊಲೀಸರು ಈ ವೇಳೆ ಪಿಎ ಸಂಗನಗೌಡ ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಖಾಸಗಿ ಪಿಎ ಸಂಗನಗೌಡ ನಿಂದಲೇ ಈ ಒಂದು ದಾಂದಲೆ ನಡೆದಿದ್ದು, ಗೇಟ್ ಬಳಿ ಕೋಟ್ ಬಿಚ್ಚಿದು ಸಿಟಿ ರವಿ ವಿರುದ್ಧ ನಿಂದನೆ ಮಾಡಿದರು. ಬಿಜೆಪಿ ಎಂಎಲ್ಸಿ ಸಿಟಿ ರವಿ ಎದುರೇ ಸಂಗನಗೌಡ ಕೂಗಾಡಿದ್ದಾನೆ. ಗೇಟ್ ತಳ್ಳಿ ಒಳನುಗ್ಗಲು ಖಾಸಗಿ ಪಿಎ ಸಂಗನಗೌಡ ಯತ್ನಿಸಿದ್ದಾನೆ.
ಈ ವೇಳೆ ತಡೆಯಲು ಯತ್ನಿಸಿದ ಮಾರ್ಷಲ್ ಗಳ ಜೊತೆಗೂ ಕೂಡ ತಳ್ಳಟ, ನೂಕಾಟ ನಡೆದಿದೆ. ಸಂಗನಗೌಡ ಆರ್ಭಟಕ್ಕೆ ಮಾರ್ಷಲ್ ಗಳು ಕೂಡ ಕೆಲಕಾಲ ದಂಗಾಗಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಖಾಸಗಿ ಪಿಎ ಸಂಗನಗೌಡನನ್ನು ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಧಾನಸಭೆ ಪಡಸಾಲೆಯ ಗೇಟ್ ಬಳಿ ಗಲಾಟೆ ಮಾಡಿದವರು ಕೂಡ ವಶಕ್ಕೆ ಪಡೆಯಲಾಗಿದ್ದು, ಸಂಗನಗೌಡ ಸೇರಿದಂತೆ 30ಕ್ಕೂ ಹೆಚ್ಚು ಜನರು ಪೊಲೀಸರ ವಶಕ್ಕೆ ಪಡೆದುಕೊಲ್ಲಲಾಗಿದೆ.