ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಐಐಎಸ್ ಸಿ ವಿದ್ಯಾರ್ಥಿ ಅನ್ಮೋಲ್ ಗಿಲ್ ನಾಪತ್ತೆಯಾಗಿದ್ದ. ಇದೀಗ ಇಂದು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಐಐಎಸ್‌ಸಿ ವಿದ್ಯಾರ್ಥಿ ಅನ್ಮೋಲ್ ಗಿಲ್ ಪತ್ತೆಹಚ್ಚಿದ್ದಾರೆ. ಆತನನ್ನು ಅನ್ಮೋಲ್ ಎಂದು ಪತ್ತೆ ಹಚ್ಚಿ ಪೊಲೀಸರು ಆತನ ಪೋಷಕರಿಗೆ ಅವವನ್ನು ಒಪ್ಪಿಸಿದ್ದಾರೆ.
ಡಿಸೆಂಬರ್ 16ರಂದು ಅನ್ಮೋಲ್ ಗಿಲ್ ನಾಪತ್ತೆಯಾಗಿದ್ದ. ಕಳೆದೆರಡು ದಿನದಿಂದ ನಗರದ ವಿವಿಧ ಭಾಗದಲ್ಲಿ ಅನ್ಮೋಲ್ ಓಡಾಡಿದ್ದಾನೆ. ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿ ಅನ್ಮೋಲ್ ರಾತ್ರಿಯನ್ನು ಕಳೆದಿದ್ದಾನೆ. ಇಷ್ಟವಿಲ್ಲದ ಕೋರ್ಸ್ ಗೆ ಪೋಷಕರು ಸೇರಿಸಿ ಹಾಸ್ಟೆಲ್ ಗೆ ಕೂಡ ಸೇರಿಸಿದ್ದರು. ಹಾಸ್ಟೆಲ್ ಸೇರಿಸಿದ್ದು ಸೇರಿ ಹಲವು ಕಾರಣಕ್ಕೆ ಗಿಲ್ ಮನನೊಂದಿದ್ದ. ಸದ್ಯ ಅನ್ಮೋಲ್ ಪತ್ತೆ ಹಚ್ಚಿ ಪೋಷಕರಿಗೆ ಯಶವಂತಪುರ ಪೊಲೀಸರು ವಿಧಿಗೆ ಒಪ್ಪಿಸಿದ್ದಾರೆ. ಐಐಎಸ್ ಸಿ ಯಲ್ಲಿ ಅನ್ಮೋಲ್ ಗಿಲ್ ಎಂಟೆಕ್ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಬೆಂಗಳೂರಿನ ಯಶವಂತಪುರ ಬಳಿ ಇರುವ ಐಐಅ ಎಸ್ ಸಿ ಕ್ಯಾಂಪಸ್ ನಿಂದ ವಿದ್ಯಾರ್ಥಿ ಏಕಾಏಕಿ ನಾಪತ್ತೆಯಾಗಿದ್ದ. ಡಿ.16ರಂದು ವಿದ್ಯಾರ್ಥಿ ಕ್ಯಾಂಪಸ್ ನಲ್ಲಿ ಹೋಗುತ್ತಿದ್ದ ದೃಶ್ಯ ಸಿಸಿಕ್ಯಾಮರದಲ್ಲಿ ಸೆರೆಯಾಗಿದೆ.ಅನ್ಮೋಲ್ ಗಿಲ್ ಐಐಎಸ್ ಸಿಯಲ್ಲಿ ಎಂ.ಟೆಕ್ ವ್ಯಾಸಂಗ ಮಾಡುತ್ತಿದ್ದ. ಯಶವಂತಪುರ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿದೆ. ಪೊಲೀಸರು ವಿದ್ಯಾರ್ಥಿಗಾಗಿ ಹುಡುಕಾಟ ನಡೆಸಿ ಇದೀಗ ಪೋಷಕರಿಗೆ ಒಪ್ಪಿಸಿದ್ದಾರೆ.