ಮಂಡ್ಯ : ನಾಳೆಯಿಂದ ಮೂರು ದಿನಗಳ ಕಾಲ ಮಂಡ್ಯ ಜಿಲ್ಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಹಾರ ನಿಷೇಧಿಸಿ ರುವುದನ್ನು ವಿರೋಧಿಸಿ ಮನೆಗೊಂದು ಕೋಳಿ ಊರಿಗೊಂದು ಕುರಿ ಸಂಗ್ರಹ ಅಭಯಾನಕ್ಕೆ ತಾಲೂಕಿನ ಹಳೆ ಬೂದನೂರು ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಂಸಹಾರಕ್ಕೆ ನಿರ್ಬಂಧ ಹಾಕಿದ ದಿನದಿಂದ ಬಾಡೂಟಕ್ಕೆ ಆಗ್ರಹಿಸುತ್ತಿದ್ದ ಬಾಡೂಟ ಬಳಗದ ಬೇಡಿಕೆಗೆ ಮನ್ನಣೆ ಸಿಗದ ಹಿನ್ನೆಲೆಯಲ್ಲಿ ಅಂದು ವಿಚಾರ ಕ್ರಾಂತಿ, ಇಂದು ಆಹಾರ ಕ್ರಾಂತಿ’ ಘೋಷಣೆಯಡಿ ಭಾಗವಹಿಸುವವರೆಗೆ ಮಾಂಸಹಾರ ನೀಡಲು ಮುಂದಾಗಿದ್ದು ಇದಕ್ಕಾಗಿ ಕೋಳಿ ಕುರಿ ಸಂಗ್ರಹಕ್ಕೆ ಮುಂದಾಗಿದೆ.