ಬೆಂಗಳೂರು: ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಅಮೇರಿಕಾಕಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತೆರಳಿದ್ದಾರೆ. ಅಲ್ಲದೇ ಡಿಸೆಂಬರ್ 24ರಂದು ಆಪರೇಷನ್ ನಡೆಯಲಿದೆ. ಆ ಬಳಿಕ ಚಿಕಿತ್ಸೆ ಪಡೆದು ಜನವರಿ.26ಕ್ಕೆ ಬೆಂಗಳೂರಿಗೆ ಅವರು ವಾಪಾಸ್ಸಾಗಲಿದ್ದಾರೆ.
ಅಮೇರಿಕಾಕ್ಕೆ ತೆರಳುವ ಮುನ್ನಾ ಸುದ್ದಿಗಾರರೊಂದಿಗೆ ಭಾವುಕರಾಗಿಯೇ ಮಾತನಾಡಿದಂತ ನಟ ಶಿವರಾಜ್ ಕುಮಾರ್, ನಿನ್ನೆಯಿಂದಲೇ ನಾನು ಅಮೇರಿಕಾಕಕ್ಕೆ ತೆರಳುತ್ತಿರುವಂತ ವಿಷಯ ತಿಳಿದು ಮನೆಗೆ ಸಂಬಂಧಿಕರು, ಕುಟುಂಬಸ್ಥರು, ಅಭಿಮಾನಿಗಳು ಆಗಮಿಸಿ, ಮಾತನಾಡಿಸುತ್ತಿ್ದದಾರೆ ಎಂದರು.
ನನಗೆ ಡಿಸೆಂಬರ್.24ರಂದು ಆಪರೇಷನ್ ಮಾಡಲು ಅಮೇರಿಕಾದಲ್ಲಿ ವೈದ್ಯರು ನಿಗದಿ ಪಡಿಸಿದ್ದಾರೆ. ಆ ಬಳಿಕ ವೈದ್ಯರ ನಿರೀಕ್ಷೆಯಲ್ಲಿದ್ದು ಜನವರಿ 26ರಂದು ಬೆಂಗಳೂರಿಗೆ ವಾಪಾಸ್ ಆಗಲಿದ್ದೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಅಂತ ತಿಳಿಸಿದರು.
ಸ್ವಲ್ಪ ದುಃಖ ಆಯಿತು. 35 ದಿನ ಮನೆಯಿಂದ ಆಚೆ ಇರಬೇಕಲ್ವ ಎಂಬುದಾಗಿ ನಟ ಶಿವರಾಜ್ ಕುಮಾರ್ ಭಾವುಕರಾಗಿಯೇ ನುಡಿದರು.
BIG NEWS: ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ALERT : ಮೊಬೈಲ್ ಬಳಕೆದಾರರೇ ಎಚ್ಚರ : ಈ ಚಿಹ್ನೆಗಳು ಕಂಡರೆ ನಿಮ್ಮ `ಫೋನ್ ಹ್ಯಾಕ್ ಆಗಿದೆ ಎಂದರ್ಥ.!